ಮಾನವನು ಸಮಾಜ ಜೀವಿ ಎನ್ನುವ ಹಾಗೇ ಆತನು ಪ್ರಕೃತಿಯ ಅಥವಾ ನಿಸರ್ಗದ ಕೂಸು ಎಂದು ಹೇಳಬಹುದು. ಮಾನವನ ಸುತ್ತು ಮುತ್ತಲು ವಿಸ್ಮಯವಾದ ನಿಸರ್ಗದಸೊಬಗು ಇದೆ ಪರಿಸರ ಎಂಬ ಜೀವಜಾಲದಲ್ಲಿ ಜೀವಿಗಳು ಒಂದನ್ನೊಂದು ಪರಸ್ಪರ ಪ್ರಭಾವಿಸುತ್ತಿರುತ್ತದೆ. ಪರಿಸರದ ಜೊತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಅದರ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ಸಾಮಾನ್ಯ ಜ್ಞಾನ ತಾನಾಗಿಯೇ ಬೆಳೆಯುತ್ತದೆ. ಆದರೆ ಇಂದಿನ ನಮ್ಮ ಜಗತ್ತಿನಲ್ಲಿ ತಂತ್ರಜ್ಞಾನಗಳು ಕಾರ್ಖಾನೆಗಳು ಕಟ್ಟಡಗಳ ನಿರ್ಮಾಣದಿಂದ ನಮ್ಮ ಸುಂದರ ನಿಸರ್ಗ ಇಂದಿನ ಕಾಲದಲ್ಲಿ ಕಾಣ ಸಿಗುವುದು ಕಷ್ಟ ಎಂದು ಹೇಳಬಹುದು.
ನಮ್ಮ ಜೀವನದಲ್ಲಿ ಎಲ್ಲವನ್ನು ಪಡೆದುಕೊಂಡಂತೆ ನಮ್ಮ ನಿಸರ್ಗ, ಗಾಳಿ, ತಂಪು, ಬೆಳಕನ್ನು ನಾವು ಪ್ರೀತಿಯಿಂದ ಪಡೆದುಕೊಳ್ಳುತ್ತೇವೆ. ಜೀವನದಲ್ಲಿ ಯಾರೂ ದೊಡ್ಡವರಲ್ಲ ಅಂದಹಾಗೆ ನಾವು ಇಂದಿನ ಯುಗಕ್ಕಿಂತ ನಮ್ಮ ಹಿಂದಿನ ಯುಗದಲ್ಲಿ ನಮಗೆ ಪರಿಸರದಿಂದ ಸಿಗುವ ಗಾಳಿ-ಬೆಳಕು ಅದು ನಿರ್ಮಲತೆಯಿಂದು ಕೂಡಿರುತ್ತಿತ್ತು.ಆದರೆ ಇಂದು ಪರಿಸರ ಮತ್ತು ಮಾನವನ ನಡುವಿನ ಸಂಬಂಧ ಶೂನ್ಯ ಅಥವಾ ಬಿಳಿ ಗೋಡೆಯ ಮೇಲೆ ಕಪ್ಪು ಬಟ್ಟೆ ಹಾಸಿದಂತಾಗಿದೆ. ಹಾಗೆಯೇ ಮಾನವನು ತಾನು ಸ್ವತಂತ್ರವಾಗಿ ಬದುಕಿದರೆ ಅವರ ಜೀವನಕ್ಕೆ ಬೇಕಾಗಿ ತನ್ನ ಮನೆಯ ಹತ್ತಿರದ ಗಿಡ-ಮರಗಳು ಪ್ರಾಣಿಗಳನ್ನು ನಾಶಮಾಡಿ ಮಾನವನು ಸುಖಕರವಾದ ಜೀವನ ನಡೆಸುತ್ತಾನೆ. ಆದರೆ ಪರಿಸರ ತನ್ನ ನೋವನ್ನು ತಾನು ಯಾರೊಂದಿಗೂ ಹೇಳಿಕೊಳ್ಳದೆ ತನ್ನ ಪಾಡಿಗೆ ತಾನು ಸುಮ್ಮನಿರುತ್ತದೆ.
ಆದರೆ ಪರಿಸರ ಇನ್ನೂ ಪಡೆದುಕೊಳ್ಳುವಂತಹ ಕೆಲಸವನ್ನು ಮಾಡುವುದಿಲ್ಲ. ಅದರ ಬದಲು ಮಾನವನಿಗೆ ಬುದ್ಧಿ ಕಲಿಸಲು ಮಡಿಕೇರಿಯಲ್ಲಿ ಆದಂತಹ ಪ್ರಕೃತಿ ವಿಕೋಪ ಒಂದು ಉದಾಹರಣೆಯಾಗಿ ನಾವು ತೆಗೆದುಕೊಳ್ಳಬಹುದು. ಪ್ರಕೃತಿಯ ಎದುರು ಯಾವುದೇ ಆಟ ನಡೆಯಲು ಸಾಧ್ಯವಿಲ್ಲ. ಇಂದು ನಮ್ಮ ಮಾನವರಿಗೆ ಈಗ ತಿಳುವಳಿಕೆ ಬಂದಿರ ಬಹುದು. ಜೀವನದಲ್ಲಿ ತಪ್ಪು ಸಹಜ ಆದರೆ ಪದೇ ಪದೇ ತಪ್ಪು ಮಾಡಿದರೆ ಯಾರು ಸುಮ್ಮನಿರಲು ಸಾಧ್ಯವಿಲ್ಲ. ಅದೇ ರೀತಿ ನಮ್ಮ ಬದುಕಿಗೆ ಉಸಿರಾಟವನ್ನು ನಡೆಸಲು ಪ್ರಕೃತಿ ಕೊಡುವಂತಹ ಆಮ್ಲಜನಕ ಮಾನವನಿಗೆ ಬೇಡ ಎಂದು ಅಂದುಕೊಂಡು ನಿಸರ್ಗವನ್ನು ಪರಿಸರವನ್ನು ಕಡೆದು ದೊಡ್ಡ ದೊಡ್ಡ ಕಾರ್ಖಾನೆ ಕಟ್ಟಡ ಮನೆಗಳನ್ನು ಕಟ್ಟಿಕೊಂಡಿರುತ್ತಾರೆ.
ಆದರೆ ಮಾನವನ ಈಗಿನ ಜೀವನ ಕೋವಿಡ್-19 ಎಂಬ ವೀರ್ಯಾಣುವಿನಲ್ಲಿ ಸಿಲುಕಿಕೊಂಡಿದೆ. ಇದು ಆಮ್ಲಜನಕವನ್ನು ಹುಡುಕಿಕೊಂಡು ಜೀವ ರಕ್ಷಣೆ ಮಾಡುವಂತಹ ಪರಿಸ್ಥಿತಿಗೆ ನಮ್ಮ ಸಮಾಜ ಹಾಗೂ ನಮ್ಮ ಜನಗಳು ತಲುಪಿದ್ದಾರೆ. ನಿಸರ್ಗದಲ್ಲಿ ಉಚಿತವಾಗಿ ಸಿಗುವಂತಹ ಉಸಿರಾಟಕ್ಕೆ ಯೋಗ್ಯವಾಗಿರುವ ಆಮ್ಲಜನಕ ಎಂದು ಮಾನವನಿಗೆ ಬೇಡ ಎಂದು ಅನಿಸಿದೆ. ಆದರೆ ಇಂದು ಜೀವ ರಕ್ಷಣೆಗಾಗಿ ಉಸಿರಾಟವನ್ನು ನಡೆಸಲು ಆಮ್ಲಜನಕವನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಇದೆ. ಹಾಗೆಯೇ ಮಾನವನು ಪರಿಪರಿಸರ ಹಿಂದೇ ಇದ್ದರೆ ನಡೆಯಬಹುದು ಆದರೆ ಪ್ರಕೃತಿಯ ಮುಂದೆ ಬಂದರೆ ಪ್ರಕೃತಿಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಾವೆಲ್ಲರೂ ಜೂನ್ 5ರಂದು ವಿಶ್ವ ಪರಿಸರ ದಿನ ಎಂದು ಆಚರಿಸುತ್ತೇವೆ.
"ಪರಿಸರದ ಜಗತ್ತು, ಮೋಡದೊಳಗೊಂದು ಮಾಯೆ..
ಕತ್ತಲಿಗೇ ಗೊತ್ತು, ನಿನ್ನದೊಂದು ಸುಂದರ ಛಾಯೆ...
ಮಾನವಗೆ ಜೋಗುಳ, ಮಡಿಲನೊಳಗೊಂಡ ತಾಯೆ..
ಮನುಜರ ತಪ್ಪನ್ನು ಕ್ಷಮಿಸಿ ನಮ್ಮೆಲ್ಲರನ್ನು ಕಾಯೇ..."
"ಪರಿಸರವೇ ಹಸಿರು ನಮ್ಮೆಲ್ಲರ ಉಸಿರು"
-Cdt.Lathashree D
No comments:
Post a Comment