2022 ಜನವರಿ 26 ರ ಗಣರಾಜ್ಯೋತ್ಸವ ದಿನದ ಅಂಗವಾಗಿ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಕ್ಯಾಂಪ್ ಹಾಗೂ ಭಾರತದ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಗೌರವ ವಂದನೆ ಸ್ವೀಕರಿಸುವ ಎನ್.ಸಿ.ಸಿಯ ವಾರ್ಷಿಕ ಪಥಸಂಚಲನದಲ್ಲಿ ಭಾಗವಹಿಸಿದ ಅಭಿಷೇಕ್ ಅಡೂರು ಅವರನ್ನು ಕುರುಂಜಿಭಾಗ್‌ನಿಂದ ಮೆರವಣಿಗೆಯ ಮೂಲಕ ಕಾಲೇಜಿಗೆ ಸ್ವಾಗತಿಸಿಕೊಳ್ಳಲಾಯಿತು.
ಕುರುಂಜಿಭಾಗ್‌ನ ಡಾ. ಕೆವಿಜಿಯವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತ ಕಾರ್ಯಕ್ರಮ ಆರಂಭವಾಯಿತು.
ಕಾಲೇಜಿನ ಎನ್.ಸಿ.ಸಿ ಘಟಕದ ಅಸೋಸಿಯೇಟ್ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಸೀತಾರಾಮ ಎಂ. ಡಿ, ಉಪನ್ಯಾಸಕರಾದ ಶ್ರೀ ವಿಷ್ಣುಪ್ರಶಾಂತ್.ಬಿ, ಶ್ರೀ ತಿಪ್ಪೇಸ್ವಾಮಿ ಡಿ.ಎಚ್ ಮತ್ತು ಶ್ರೀ ಹರಿಪ್ರಸಾದ್ ಎ.ವಿ ಇವರು ಸೇರಿ ಅಭಿಷೇಕ್‌ರವರನ್ನು ಹೂಮಾಲೆ ಹಾಕಿ ಸ್ವಾಗತಿಸಿದರು.
ಎನ್.ಸಿ.ಸಿ ಘಟಕದ ಜೂನಿಯರ್ ಅಂಡರ್ ಆಫೀಸರ್ ಸಂಧ್ಯಾ ಎಂ.ಆರ್ ಇವರ ನೇತೃತ್ವದಲ್ಲಿ ಎನ್.ಸಿ.ಸಿ ಘಟಕದ ಕೆಡೆಟ್‌ಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಮೆರವಣಿಗೆಯ ಮೂಲಕ ಕಾಲೇಜಿನ ಕಡೆಗೆ ಸಂಭ್ರಮ ಸಂಚಲನ ನಡೆಸಿದರು
ವಿದ್ಯಾರ್ಥಿಗಳ ನಾಸಿಕ್ ಬ್ಯಾಂಡ್ ತಂಡವು ಜೊತೆಯಾಯಿತು. ಕಾಲೇಜ್ ಆವರಣದಲ್ಲಿ ಎನ್.ಸಿ.ಸಿ ಬ್ಯಾಂಡ್‌ನ ಮೂಲಕ ಮೆರವಣಿಗೆಯು ವಿದ್ಯಾರ್ಥಿಗಳಿಂದ ನೆರೆದಿದ್ದ ಕಾಲೇಜಿನ ಮಂಭಾಗಕ್ಕೆ ತಲುಪಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ಶ್ರೀಮತಿ ರತ್ನಾವತಿ ಡಿ. ಇವರು ಅಭಿಷೇಕ್‌ರವರಿಗೆ ಹಾರ ಹಾಕುವ ಮೂಲಕ ಅಧಿಕೃತವಾಗಿ ಕಾಲೇಜಿಗೆ ಬರಮಾಡಿಕೊಂಡರು. ಕಾಲೇಜಿನ ಎಲ್ಲಾ ಉಪನ್ಯಾಸಕ, ಉಪನ್ಯಾಸಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಜೊತೆಯಾದರು.
SUO. Abhishek A |
WELCOME VIDEO
ಜೈಹಿಂದ್...!
ReplyDelete