ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ಪ್ರಥಮ ಬಾರಿಗೆ ಎನ್.ಸಿ.ಸಿ ಕ್ಯಾಂಪ್ ನಡೆಯಿತು. ದಿನಾಂಕ 15 ರಿಂದ 22 ಅಕ್ಟೋಬರ್ ವರೆಗೆ ಆರ್.ಡಿ.ಸಿ ಆಯ್ಕೆಯ ಕ್ಯಾಂಪ್ ಜೊತೆಯಲ್ಲಿ ಸಿಎಟಿಸಿ ನಡೆದಿದೆ. ಅಕ್ಟೋಬರ್ 16ರಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಸುಳ್ಯ ಇದರ ಅಧ್ಯಕ್ಷ ಡಾ. ಕೆ. ವಿ. ಚಿದಾನಂದ ಇವರು ಕ್ಯಾಂಪನ್ನು ಅಧಿಕೃತವಾಗಿ ಉದ್ಘಾಟಿಸಿದರು.
ಇದರಲ್ಲಿ ಮಂಗಳೂರು, ಉಡುಪಿ , ಶಿವಮೊಗ್ಗ , ಹಾಗೂ ಕೊಡಗು ಜಿಲ್ಲೆಗಳ ವಿವಿಧ ಯುನಿಟ್ ಗಳ ಸುಮಾರು 450 ಎನ್ ಸಿ ಸಿ ಕೆಡೆಟ್ ಗಳು ಪಾಲ್ಗೊಂಡಿದ್ದಾರೆ. ಮಂಗಳೂರು ಗ್ರೂಪ್ ಎಂದು ಕರೆಯಲ್ಪಡುವ ಈ ವಿಭಾಗದ ಎನ್.ಸಿ.ಸಿ.ಯ 18, 19, 20 ಮತ್ತು 21 ಆರ್ಮಿ ಬೆಟಾಲಿಯನ್ ಹಾಗೂ ಎನ್.ಸಿ.ಸಿ. ನೇವಲ್ & ಏರ್ ವಿಂಗ್ ಕೆಡೆಟ್‌ಗಳು ಭಾಗವಹಿಸಿದ್ದರು. ಮಂಗಳೂರು ಗುಂಪಿನ ಕಮಾಂಡರ್ ಹಾಗೂ 19 ಕರ್ನಾಟಕ ಮಡಿಕೇರಿ ಬೆಟಾಲಿಯನ್ ನ ಕಮಾಂಡರ್ " ಕೊಲೋನೆಲ್ ಝಪ್ರಿನ್ ಗಿಲ್ಭರ್ಟ್ ಅರಣಹ " ಇವರ ನಾಯಕತ್ವದಲ್ಲಿ ಕ್ಯಾಂಪ್ ನಡೆಯಿತು. ಇತರ ಬೆಟಾಲಿಯನ್ ಗ್ರೂಪ್ ಕಮಾಂಡರ್ಸ್, ಎ.ಎನ್.ಒ ಆಫೀಸರ್ಸ್, ಕಲಿಸಿಕೊಡುವ ಆರ್ಮಿ ಸೇನೆಯವರು (PI Staff) ಜೊತೆಯಾದರು. 8 ದಿವಾಸಗಳ ಈ ಕ್ಯಾಂಪ್ ನಲ್ಲಿ ಫೈರಿಂಗ್, ರೈಫಲ್ ಕವಾಯತ್ತು ಜೊತೆಗೆ ಜನವರಿ 26 ರಂದು ದೆಹಲಿಯಲ್ಲಿ ನಡೆಯಲ್ಲಿರುವ ಗಣರಾಜ್ಯೋತ್ಸವ ಕ್ಯಾಂಪ್ ಗೆ ಎನ್.ಸಿ.ಸಿ ಕೆಡೆಟ್ ಗಳನ್ನು ಆಯ್ಕೆಮಾಡಿ ತರಬೇತಿಯನ್ನು ನೀಡಿದ್ದಾರೆ.
ಆರ್.ಡಿ. ಸಿ ಎಂಬುದು ವಿಶಿಷ್ಠವಾದ ಕ್ಯಾಂಪ್ ಆಗಿದ್ದು ದೇಶದ ಎಲ್ಲಾ ಕಡೆಗಳಿಂದ ಆಯ್ಕೆಯಾದ ಕೆಡೆಟ್ ಗಳು ದೆಹಲಿಯಲ್ಲಿ ತಮ್ಮ ಕಾರ್ಯಕ್ಷಮತೆಯನ್ನು ತೋರಿಸುತ್ತಾರೆ. ಈ ಕ್ಯಾಂಪನಲ್ಲಿ ಹಲವಾರು ತರದ ಸ್ಪರ್ಧೆ ಇದ್ದು ಅದರಲ್ಲಿ ಫ್ಲೇಗ್ ಏರಿಯಾ, ಬೆಸ್ಟ್ ಕೆಡೆಟ್, ಕಲ್ಚರಲ್ ಹಾಗೂ ಡ್ರಿಲ್ ಸ್ಪರ್ಧೆಗಳನ್ನು ನಡೆಸಲಾಗಿರುತ್ತದೆ.
ಫ್ಲಾಗ್ ಏರಿಯಾ ಸ್ಪರ್ಧೆಯ ಮುಖ್ಯ ಉದ್ದೇಶವು ಎಲ್ಲಾ ಕೆಡೆಟ್ಸ್ ಯಾವರಿತಿ ತಮ್ಮ ನೆಪುಣ್ಯತೇಗಳನ್ನು ಬಳಸಿಕೊಂಡು ತಮ್ಮ ಜಿಲ್ಲೆ ಹಾಗೂ ರಾಜ್ಯದ ವಿವಿಧ ಕಲೆ, ಶಾಸ್ರ, ಹಬ್ಬ, ವಿವಿಧ ಭಾಷೆಗಳು, ವಿವಿಧ ಪ್ರಾಚೀನ ಸ್ಥಳಗಳ ಇತಿಹಾಸ ಇತ್ಯಾದಿಗಳನ್ನು ರಂಗೋಲಿಯ ಸಹಾಯದಿಂದ ತೋರಿಸಿಕೊಡುತ್ತಾರೆ ಎಂದು ಪರೀಕ್ಷಿಸುವುದಾಗಿದೆ.
ಬೆಸ್ಟ್ ಕೆಡೆಟ್ ಸ್ಪರ್ಧೆಯಲ್ಲಿ ಸೂಕ್ತ ಕೆಡೆಟ್ಗಳಿಗೆ ಪರೀಕ್ಷೆ, ಡ್ರಿಲ್ ಟೆಸ್ಟ್, ಫೈರಿಂಗ್ ಸ್ಪರ್ಧೆ,ಇಂಟರ್ವ್ಯೂ ಮುಂತಾದ ಕಠಿಣ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಒಬ್ಬ ಕೆಡೆಟ್ ತನ್ನ ಜೀವನದಲ್ಲಿ ಶಿಸ್ತು , ನಾಯಕತ್ವ , ಸಮಯಪ್ರಜ್ಞೆ ಹಾಗೂ ಎಕತೆ ಅಳವಡಿಸಿಕೊಳ್ಳಲು ಈ ಕ್ಯಾಂಪ್ ಸೂಕ್ತವಾಗಿದೆ. ಇದು ಕಠಿಣವಾದ ಆಯ್ಕೆ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ.
ಕಲ್ಚರಲ್ ವಿಭಾಗದ ಕೇಡೆಟ್‌ಗಳಿಗೆ ನೃತ್ಯ ಗಾಯನ ವಾದನಗಳ ಬಗ್ಗೆ ವಿಶೇಷ ತರಬೇತಿ ನೀಡಲಾಯಿತು. ಡ್ರಿಲ್ ಕೆಡೆಟ್‌ಗಳು ದಿನವಿಡೀ SLR ರೈಫಲ್ ಜೊತೆಗೆ ನಡೆಯುವುದು ಓಡುವುದು ಮುಂತಾದ ತಾಲೀಮು ಪಡೆದರು.
ಹಾಗೆಯೇ ಸಿ.ಎ.ಟಿ.ಸಿ.(ಕಂಬೈನೆಡ್ ಅನ್ನುಯಲ್ ಟ್ರೇನಿಂಗ್ ಕ್ಯಾಂಪ್) ಇದರಲ್ಲಿ ಮುಖ್ಯವಾಗಿ ಕೆಡೆಟ್ಸ್ ತಮ್ಮನ್ನು ತಾವು ಯಾವ ರಿತಿ ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಂಳಿಸುತ್ತಾರೆ ಎಂಬುವುದನ್ನು ಪರೀಕ್ಷಿಸಲಾಗುತ್ತದೆ. ಮುಂಜಾನೇ 6 ರಿಂದ ಶುರುವಾಗಿ ರಾತ್ರಿ 9 ರ ತನಕ ವಿವಿಧ ಹಲವಾರು ಚಟುವಟಿಕೆ ನಡೆಯಿತು. ಇದರಲ್ಲಿ ಬೇಸಿಕ್ ಡ್ರಿಲ್ ಹಾಗೂ ಕಲ್ಚರಲ್ ಪ್ರೋಗ್ರಾಮ್ ಇದ್ದು ವಿವಿಧ ಆಚಾರ - ವಿಚಾರದ ಮಾಹಿತಿ ಹಾಗೂ ಹಲವಾರು ತರಹದ ಜನರೊಂದಿಗೆ ಬೆರೆತು ಅವರ ಮಾತನಾಡುವ ಶೈಲಿ ಮುಂತಾದವನ್ನು ಕಾಣುವ ಅವಕಾಶ ಸಿಗುತ್ತದೆ. ಈ ಕ್ಯಾಂಪ್ ಬೇಸಿಕ್ ಟ್ರೇನಿಂಗ್ ಹಾಗು ಜಡ್ಜ್ಯಿಂಗ್ ಡಿಸ್ಟೆನ್ಸ್, ಮ್ಯಾಪ್ ರೀಡಿಂಗ್, ರೈಫಲ್ ಖೋಲ್ನ - ಜೋಡ್ನ ಇತ್ಯಾದಿ ಚಟುವಟಿಕೆಗಳಿಂದ ಕೂಡಿರುತ್ತದೆ. ರಕ್ತದಾನ ಮಹಾದಾನ! ಏನ್.ಎಂ.ಸಿ. ಕಾಲೇಜಿನ ಕ್ಯಾಂಪಿನಲ್ಲಿ ಭಾಗವಹಿಸಿದ ಕೆಡೆಟ್ ಹಾಗೂ ಹಲವು ಪಿ.ಐ. ಸ್ಟಾಫ್ ಗಳು ಹಾಗೂ ಎ.ನ್.ಓ. ಆಫೀಸರ್ಸ್ ದಿ.19 ರಂದು ರಕ್ತದಾನದ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. ದಿನಾಂಕ 21-10-2022 ರಂದು ಎಲ್ಲಾ ಕೆಡೆಟ್ಸ್ ಸೇರಿ ಸ್ವಚ್ಛ ಭಾರತ್ ಚಟುವಟಿಕೆಯನ್ನು ಯಶಶ್ವಿಯಾಗಿ ನಡಿಸಿದರು. ಹಾಗೂ ಇಂಡಿಯನ್ ಡಿಫೆಂನ್ಸ್ ಫೋರ್ಸ್ ಜಾಯಿನ್ ಆಗಲು ಅಸಾಕ್ತಿ ಇರುವ ಕೆಡೆಟ್ಸ್ ಹಾಗೂ ಇನ್ನಿತರ ಆಸಕ್ತಹುದಾರರಿಗೆ
www.indiancombat.com
ವೆಬ್ ಸೈಟ್ ಸೂಕ್ತವಾಗಿದೆ ಎಂದು ತಿಳಿಸಿಕೊಡಲಾಯಿತು.
ಕ್ಯಾಂಪ್ ನಲ್ಲಿ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿದ್ದು, ರಕ್ಷಣಕಲೆ, ಆರೋಗ್ಯ ಹಾಗೂ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಹಾಗೆಯೇ ಕ್ಯಾಂಪ್ ಗೆ ಬೇಕಾದ ಮೂಲ ಸೌಕರ್ಯಗಳಾದ ವಸತಿ ,ಆಹಾರ ,ಚಿಕಿತ್ಸೆ ಹಾಗೂ ಅಗತ್ಯ ಸಾಮಾಗ್ರಿಗಳನ್ನು ಕಾಲೇಜಿನ ಆಡಳಿತ ಮಂಡಳಿ ನೋಡಿಕೊಂಡು ಕ್ಯಾಂಪನ್ನು ಸುಗಮವಾಗಿ ನಡೆಸಿದ್ದಾರೆ.
ಶಿಬಿರದ ಸಮಾರೋಪ ಸಮಾರಂಭ ಕೆವಿಜಿ ಷಷ್ಟ್ಯಬ್ದ ರಂಗಮಂದಿರದಲ್ಲಿ 21-10-2022 ರಂದು ಸಾಯಂಕಾಲ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ನಿರ್ದೇಶಕ ಅಕ್ಷಯ್ ಕೆ ಸಿ ಭಾಗವಹಿಸಿ ಮಾತನಾಡಿದರು. ಕಮಾಂಡಿಂಗ್ ಆಫೀಸರ್ ಕರ್ನಲ್ ಜೆಫ್ರಿನ್ ಗಿಲ್ ಬರ್ಟ್ ಅರನ್ಹಾ ಸಮಾರೋಪ ಭಾಷಣ ಮಾಡಿದರು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಲೆಫ್ಟಿನೆಂಟ್ ಕರ್ನಲ್ ಚಾಕೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಎನ್ ಸಿ ಸಿ ಅಧಿಕಾರಿ ಲೆ. ಸೀತಾರಾಮ ಎಂ ಡಿ, ವಿವಿಧ ಬೆಟಾಲಿಯನ್ ಗಳ ಅಧಿಕಾರಿಗಳು, ವಿವಿಧ ಕಾಲೇಜಿನ ಅಸೋಸಿಯೇಟ್ ಎನ್ ಸಿ ಸಿ ಆಫೀಸರ್ ಗಳು ಹಾಗು ಎನ್ ಸಿ ಸಿ ಕೆಡೆಟ್ ಗಳು, ಕಾಲೇಜಿನ ಬೋಧಕ ಬೋಧಕೇತರ ವೃಂದದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಎಂಟು ದಿನಗಳ ಕಾಲ ನಡೆದ ಶಿಬಿರದ ಚಟುವಟಿಕೆಗಳನ್ನು ದಾಖಲಿಸಿದ ಸ್ಮರಣ ಸಂಚಿಕೆಯನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಶಿಬಿರದಲ್ಲಿ ಕೆಡೆಟ್ ಗಳಿಗೆ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. 2022 ಜನವರಿ ಯಲ್ಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ ಕಾಲೇಜಿನ ಎನ್ ಸಿ ಸಿ ಕೆಡೆಟ್ ಅಭಿಷೇಕ್ ಎ ಅವರನ್ನು ಅಭಿನಂದಿಸಲಾಯಿತು.
No comments:
Post a Comment