ಕಾಲೇಜಿನ ಎನ್.ಸಿ.ಸಿ ಯುನಿಟ್‌ಗೆ SLR ತರಬೇತಿ ರೈಫಲ್ ಹಾಗೂ ಬ್ಯಾಂಡ್ ಸೆಟ್ ಲೀಡರ್ ಮೇಜರ್ ಸ್ಟಿಕ್ ಅವಶ್ಯಕತೆ ಮನಗಂಡು, 2019-22 ಎನ್.ಸಿ.ಸಿ ಬ್ಯಾಚ್‌ನ ಎಲ್ಲಾ ಕೆಡೆಟ್‌ಗಳು ಸೇರಿ ₹8,000 ಸೇರಿಸಿ ಕಾಲೇಜಿಗೆ ಕೊಡುಗೆ ನೀಡಿದರು.
2019-22 ಬ್ಯಾಚ್‌ನ ಸೀನಿಯರ್ ಅಂಡರ್ ಆಫೀಸರ್ ಅಭಿಷೇಕ್ ಎ ಅವರ ನೇತೃತ್ವದಲ್ಲಿ ಕಾಲೇಜಿಗೆ ತಲುಪಿಸಲಾಯಿತು ಹಾಗೂ ಎನ್.ಸಿ.ಸಿ ಘಟಕದ ನೇತೃತ್ವ ವಹಿಸಿರುವ ಅಸೋಸಿಯೇಟ್ ಎನ್.ಸಿ.ಸಿ ಆಫೀಸರ್ ಲೆಫ್ಟಿನೆಂಟ್ ಸೀತಾರಾಮ ಎಮ್ ಡಿ ಅವರಿಗೆ, ಬ್ಯಾಚ್‌ನ್ನು ಪ್ರತಿನಿಧಿಸಿ ಹಸ್ತಾಂತರಿಸಲಾಯಿತು.
ತದನಂತರ ಎ.ಎನ್.ಒ. ಸರ್ ಎಸ್.ಎಲ್.ಆರ್. ರೈಫಲ್ ಹಾಗೂ ಬ್ಯಾಂಡ್ ಸೆಟ್ ಲೀಡರ್ ಮೇಜರ್ ಸ್ಟಿಕ್‌ನ್ನು 2020-23 ಬ್ಯಾಚ್‌ನ ಸೀನಿಯರ್ ಕೆಡೆಟ್‌ಗಳಿಗೆ ಹಸ್ತಾಂತರಿಸಿದರು.
No comments:
Post a Comment