ಇಂದು ನಡೆದ ಕೆ.ವಿ.ಜಿ ಕಾನೂನು ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಸಮಾರಂಭ ಸಮಯ 9 ಜನವರಿ 19 ರಂದು ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ತುಕಾರಾಮ ಏನೇಕಲ್ಲು ಅವರು ಮತ್ತು ಪ್ರೆಸಿಡೆಂಟ್ ಆಫ್ ಅಕಾಡೆಮಿಕ್ ಅಫ್ ಲಿಬರಲ್ ಎಜುಕೇಶನ್ Dr. ಕೆ ವಿ ಚಿದಾನಂದ ಗೌಡ ಅವರು ಮತ್ತು ಕಾನೂನು ಕಾಲೇಜಿನ ಪ್ರಾಂಶುಪಾಲರು ಹಾಗೂ ಎಲ್ಲಾ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕ್ರೀಡಾ ಎಂಬುದು ಒಬ್ಬ ಮನುಷ್ಯನ ಜೀವನಕ್ಕೆ ಎಷ್ಟು ಮುಖ್ಯ ಮತ್ತು ಇನ್ನಿತರ ಅಮೂಲ್ಯವಾದ ಮಾತುಗಳನ್ನಾಡಿ ಸಭೆಯ ಮುಖ್ಯ ಅತಿಥಿಗಳು ಎಲ್ಲಾ ಕ್ರೀಡಾ ಪಟ್ಟುಗಳನ್ನು ಹುರಿದುಂಬಿಸಿದ್ದಾರೆ.
ಉದ್ಘಾಟನ ಸಮಾರಂಭದ ಬ್ಯಾಂಡ್ ಸೆಟ್ ತಂಡವಾಗಿ ಎನ್ ಎಂ ಸಿ ಕಾಲೇಜಿನ ಎನ್ ಸಿ ಸಿ ಕೆಡೆಟ್ಸ್ ಮತ್ತು ಬ್ಯಾಂಡ್ ಮಾಸ್ಟರ್ ಆಗಿ Cdt. ಕೃಷ್ಣರಾಜ್ ಕೆ ಎಸ್ ಭಾಗಿಯಾಗಿ ಸಮಾರಂಭವನ್ನು ಯಶಶ್ವಿಗೊಳಿಸುವಲ್ಲಿ ಪಾಲ್ಗೊಂಡಿದ್ದಾರೆ.
No comments:
New comments are not allowed.