ಮೌಲ್ಯಯುತ ನೀರು

ನೀರು ಎಂದರೆ ವಿಭಿನ್ನ ಜನರಿಗೆ ವಿಭಿನ್ನವಾದ ಉಪಯೋಗಕ್ಕಾಗಿ ವಿಭಿನ್ನ ರೀತಿಯಲ್ಲಿ ಲಭಿಸುವುದು ಆಗಿದೆ.. ನೀರು ನಮ್ಮ ಜೀವನಕ್ಕೆ ಅನುಕೂಲವಾಗುವ ಎಲ್ಲಾ ವಿವಿಧ ನೀರಿನ ಮೂಲಗಳನ್ನು ಸಂರಕ್ಷಿಸುವ ಮೂಲಕ, ನಾವು ನೀರನ್ನು ಸರಿಯಾಗಿ ಮೌಲ್ಯೀಕರಿಸಬಹುದು ಮತ್ತು ಅದನ್ನು ಮುಂದಿನ ಪೀಳಿಗೆಗೆ ಪರಿಣಾಮಕಾರಿಯಾಗಿ ಕಾಪಾಡಬಹುದು. ಯುನೈಟೆಡ್ ನೇಷನ್ಸ್ ವರದಿ ಪ್ರಕಾರ ಜಾಗತಿಕ ಗುರಿಗಳನ್ನು ಸಾಧಿಸಲು ನೀರನ್ನು ಸೂಕ್ತವಾಗಿ ಮೌಲ್ಯಮಾಪನ ಮಾಡುವುದು ಮುಖ್ಯವಾಗಿದೆ ಎಂದು ಗುರುತಿಸಿದೆ. ಮಾರ್ಚ್ 22 ರ ವಿಶ್ವ ಜಲ ದಿನಾಚರಣೆಯಂದು, 2021 ರೈ ವರದಿಯನ್ನು 'ಮೌಲ್ಯಯುತ ನೀರು' ವಿಷಯದಲ್ಲಿ 'ಯುಎನ್ ವಿಶ್ವ ಜಲ ಅಭಿವೃದ್ಧಿ ಮಂಡಳಿ' ಪ್ರಕಟಿಸಲಿದೆ. ನೀರಿನ ಮೌಲ್ಯವು ಅದರ ಬೆಲೆಗಿಂತ ಹೆಚ್ಚಿನದಾಗಿದೆ - ನೀರು ನಮ್ಮ ಮನೆಗಳಿಗೆ, ಆಹಾರ, ಸಂಸ್ಕೃತಿ, ಆರೋಗ್ಯ, ಶಿಕ್ಷಣ, ಅರ್ಥಶಾಸ್ತ್ರ ಮತ್ತು ನಮ್ಮ ನೈಸರ್ಗಿಕ ಪರಿಸರದಲ್ಲಿ ಸಮಗ್ರವಾದ ಅಗಾಧ ಮತ್ತು ನಿರ್ಣಾಯಕ ಮೌಲ್ಯವನ್ನು ಹೊಂದಿದೆ. ಈ ರೀತಿ ವಿಶಾಲ ದೃಷ್ಟಿಕೋನದಿಂದ ಪರಿಗಣಿಸದೆ ನೀರಿನ ಮೌಲ್ಯವನ್ನು ನಾವು ಕಡೆಗಣಿಸಿದರೆ, ಪುನರುತ್ಪತ್ತಿ ಆಗದ ಸಂಪನ್ಮೂಲಗಳಲ್ಲಿ ಒಂದಾದ ನೀರನ್ನು ನಾವು ತಪ್ಪಾಗಿ ಅರ್ಥೈಸಿಕೊಂಡು ಈ ಲೋಕದಿಂದ ಕಳೆದುಕೊಳ್ಳುವ ಅಪಾಯವಿದೆ. ಎಲ್ಲರಿಗೂ ನಿರ್ಮಲ ನೀರನ್ನು ಖಚಿತಪಡಿಸುವುದು ಎಸ್‌ಡಿಜಿ 6 ರ ದೀರ್ಘ ದೃಷ್ಟಿಯ ಉದ್ದೇಶವಾಗಿದೆ. ನೀರಿನ ನಿಜವಾದ ಬಹುಆಯಾಮದ ಮೌಲ್ಯದ ಬಗ್ಗೆ ಸಮಗ್ರ ತಿಳುವಳಿಕೆ ಇಲ್ಲದೆ, ಪ್ರತಿಯೊಬ್ಬರ ಅನುಕೂಲಕ್ಕಾಗಿ ಈ "ಜೀವತುಂಬಿರುವ" ಸಂಪನ್ಮೂಲವನ್ನು ರಕ್ಷಿಸಲು ನಮಗೆ ಸಾಧ್ಯವಾಗುವುದಿಲ್ಲ.

ಶುದ್ಧ ತಿಳಿನೀರಿನ ಲಭ್ಯತೆಯನ್ನು ಲೋಕದ ಎಲ್ಲ ಜನರಿಗೆ ಖಾತರಿಪಡಿಸುವ ದೊಡ್ಡ ಗುರಿಯನ್ನು ಇರಿಸಿಕೊಂಡು ಪ್ರತಿವರ್ಷ ವಿಶ್ವ ಜಲ ದಿನಾಚರಣೆಯನ್ನು ಆಚರಿಸಲಾಗುವುದು. ಪ್ರತಿವರ್ಷ ವಿವಿಧ ಉಪ ಉದ್ದೇಶಗಳೊಂದಿಗೆ ಆಚರಿಸಲ್ಪಡುವ ಜಲ ದಿನಾಚರಣೆಯು ಈ ಬಾರಿ "ಮೌಲ್ಯಯುತ ನೀರು" ಎಂಬ ಧ್ಯೇಯಯೋದ್ದೇಶದೊಂದಿಗೆ ವಿಶ್ವದಾದ್ಯಂತ ಆಚರಿಸಲ್ಪಡುತ್ತದೆ. ವಿಶ್ವದಾದ್ಯಂತ ವಾಸಿಸುವ 2.2 ಮಿಲಿಯನ್ ಜನರು ಎದುರಿಸುತ್ತಿರುವ ಶುದ್ಧ ಕುಡಿಯುವ ನೀರಿನ ಸಮಸ್ಯೆಯನ್ನು ಆದಷ್ಟು ಬೇಗ ನಿವಾರಿಸಲು ಪ್ರತಿಯೊಬ್ಬ ಮಾನವನು ತನ್ನ ಜಾಗೃತ ಭಾವನೆಯಿಂದ ನೀರನ್ನು ಸಂರಕ್ಷಿಸಿ ಉಳಿಸಿ ಮಾನವೀಯತೆ ಮೆರೆಯಬೇಕಾಗಿದೆ.

ನೀರು

              ವಿಕಿಪೀಡಿಯದಲ್ಲಿ 'ಎಲ್ಲ ಜೀವಿಗಳಿಗೂ ಅಗತ್ಯವಾದ ರುಚಿ ರಹಿತ ವಸ್ತು' ಎಂಬ ಹಾಗೆ ವ್ಯಾಖ್ಯಾನಿಸಲ್ಪಟ್ಟ ನೀರು ತನ್ನದೇ ಆದ ವಿಶೇಷತೆ ಹಾಗೂ ವಿಶಾಲ ಉಪಯೋಗ ಅವಕಾಶಗಳಿಂದ ಅದರ ಮಹತ್ವವನ್ನು ಹೆಚ್ಚಿಸಿದೆ. ಅನಾದಿಕಾಲದಿಂದಲೂ ಕೂಡ ನೀರಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುವುದರೊಂದಿಗೆ, ಜೀವನು ತಾನು ಮುಂದುವರಿಸುವ ತನ್ನ ಆರೋಗ್ಯವಂತ ಜೀವನಕ್ಕೆ ಪ್ರಮುಖ ಕಾರಣವೆನಿಸಿದೆ. ಲೆಕ್ಕಾಚಾರದಂತೆ ಭೂಮಿಯ 70% ನೀರಿನಿಂದ ಆವೃತವಾಗಿದ್ದು ಹೇರಳವಾದ ನೀರಿನ ಸಾನಿಧ್ಯವನ್ನು ಕಾಣಬಹುದು. ಕುಡಿಯುವ ನೀರಿನ ಪ್ರಮಾಣ ಇದರಲ್ಲಿ ಕೇವಲ ಮೂರರಷ್ಟು ಮಾತ್ರ ಎಂಬುದನ್ನು ಗಮನದಲ್ಲಿರಿಸಬೇಕಾಗಿದೆ. ಕುಡಿಯುವ ನೀರಿನ ಮೂಲಗಳಾದ ಕೆರೆ ಬಾವಿ ಸರೋವರ ನದಿ ಮೊದಲಾದವುಗಳು ಪ್ರಾಣಿಗಳು ಅಥವಾ ಮಾನವರಿಗೆ ರೋಗರಹಿತ ಉತ್ಸಾಹದ ಜೀವನವನ್ನು ನಡೆಸಲು ಶಕ್ತಿಯನ್ನು ನೀರಿನ ಮೂಲಕ ಒದಗಿಸುತ್ತದೆ. ಶುದ್ಧ ಕುಡಿಯುವ ನೀರಿನ ಪೂರೈಕೆ ಸಾಮಾನ್ಯನಿಂದ ಹಿಡಿದು ಆಗರ್ಭ ಶ್ರೀಮಂತನೂ ಕೂಡ ಅಪೇಕ್ಷಿಸದೆ ಸ್ವೀಕರಿಸುವ ಅಮೂಲ್ಯ ಅವಶ್ಯಕ ವಸ್ತು. ನೀರು ಜನಸಾಮಾನ್ಯರ ಅವಶ್ಯತೆ ಗಳನ್ನು ಪೂರೈಸಿ ಸಂಪೂರ್ಣ ಆರೋಗ್ಯವಂತ ಜೀವನವನ್ನು ನಡೆಸಲು ಅನುವು ಮಾಡಿಕೊಟ್ಟು ಪ್ರಾಣಿ-ಪಕ್ಷಿಗಳಿಗೆ ಕೂಡ ದೇಹ ಆಲಸ್ಯವನ್ನು ದೂರ ಮಾಡಿ ಹೊಸ ಹುರುಪನ್ನು ನೀಡುವ ದ್ರವ್ಯ. ಕೃಷಿ ಪ್ರಧಾನವಾಗಿದ್ದ ಭಾರತದ ಸ್ವಾವಲಂಬಿ ಜೀವನದ ಎಲ್ಲಾ ಹಂತಗಳನ್ನು ಬಲಿಷ್ಠವಾಗಿ ದರಿಸಲು ನೀರಿನ ಅವಶ್ಯಕತೆಗೆ ತಕ್ಕ ಲಭ್ಯತೆ ತುಂಬಾ ಉಪಕಾರಿಯಾಯಿತು. ನೀರಿನ ಮೂಲಗಳನ್ನು ನಂಬಿಕೊಂಡು ಆಹಾರ ದವಸಧಾನ್ಯಗಳನ್ನು ಬೆಳೆಸಿ ಜೀವನವನ್ನು ನಡೆಸುವ ಅದೆಷ್ಟೋ ಕುಟುಂಬ ಭಾರತದಲ್ಲಿ ಕಾಣಬಹುದು. ಇಷ್ಟೆಲ್ಲಾ ಮೂಲ ಅವಶ್ಯಕತೆ ಮೀರಿ ಆಧುನಿಕ ಕಟ್ಟಡ ನಿರ್ಮಾಣಕ್ಕಾಗಿ ದೊಡ್ಡ ದೊಡ್ಡ ಫ್ಯಾಕ್ಟರಿಗಳಲ್ಲಿ ಅದೆಷ್ಟೋ ವಿಧದ ವಸ್ತುಗಳನ್ನು ತಯಾರಿಸಲು ನೀರಿನ ಅವಶ್ಯಕತೆ ಎದ್ದು ಕಾಣುತ್ತದೆ.


 

ನೀರಿನ ಸವಾಲುಗಳು

              ಮುಂದೆ ನೀರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಗಮನಹರಿಸುವುದಾದರೆ, ‌ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅಂತಹ ಬೆಂಗಳೂರು ಮುಂತಾದ ದೊಡ್ಡ ದೊಡ್ಡ ನಗರಗಳಲ್ಲಿ ಕೂಡ ನೀರಿನ ಅವಶ್ಯಕತೆ ಹೆಚ್ಚುತ್ತಿದೆ. ಶಿಕ್ಷಣ-ಉದ್ಯೋಗ ವ್ಯಾಪಾರ ಮುಂತಾದ ಕ್ಷೇತ್ರಗಳಲ್ಲಿ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಲು ಸಾಧ್ಯವಾಗಿದ್ದರೂ ಕೂಡ ಸಮರ್ಪಕವಾಗಿ ಕುಡಿಯುವ ನೀರಿನ ಬಳಕೆ ನಿಯಂತ್ರಿಸಲು ನಗರಗಳಲ್ಲಿ ಕೂಡ ಸಾಧ್ಯವಾಗದೆ ದೊಡ್ಡ ಸಮಸ್ಯೆಯಾಗಿ ಮೂಡಿಬಂದಿದೆ ಎಂಬುದು ಬೇಸರದ ಸಂಗತಿ. ಅತಿಯಾದ ಭೂಗರ್ಭ ನೀರಿನ ಬಳಕೆ ಶುದ್ಧನೀರಿನ ಮೂಲಗಳ ಮೇಲೆ ಪ್ರಭಾವ ಬೀರುತ್ತದೆ. ಕೊಳವೆ ಬಾವಿ ಕೊರೆಯುವ ಮೂಲಕ ಮಣ್ಣಿನ ಮೇಲ್ಮೈಗಿಂತ ಸ್ವಲ್ಪ ತಳಭಾಗದಲ್ಲಿ ಇದ್ದ ತಿಳಿನೀರನ್ನು ಭೂಗರ್ಭಕ್ಕೆ ಸಾಗೀಸಿದೆ. ದಿನನಿತ್ಯ ತಲೆಯೆತ್ತುತ್ತಿರುವ ಹೊಸ ಹೊಸ ಕಾರ್ಖಾನೆಗಳು ತನ್ನದೇ ಆದ ರೀತಿಯಲ್ಲಿ ಅದಾವುದೋ ವಸ್ತುವನ್ನು ನಿರ್ಮಿಸುವ ಕಾರ್ಯದ ನಿಮಿತ್ತ ಶುದ್ಧ ಜಲಮೂಲಗಳಿಂದ ಹೇರಳವಾಗಿ ನೀರನ್ನು ಬಳಸಿ ಕಲುಷಿತವಾದ , ಶುದ್ಧೀಕರಣ ಗೊಳಿಸಲು ಅಸಾಧ್ಯವಾದ ನೀರನ್ನು ಹರಿಬಿಟ್ಟು ಪರಿಸರ ಹಾಗೂ ಶುದ್ಧ ನೀರಿನ ಮೂಲಗಳನ್ನು ಮಾಲಿನ್ಯ ಗೊಳಿಸುತ್ತದೆ.ಕೇವಲ ಬಂದು ಪ್ರದೇಶವನ್ನು ಕೇಂದ್ರೀಕರಿಸಿ ಬೆಳೆಯುತ್ತಿರುವಂತಹ ನಗರೀಕರಣ ಪ್ರಕ್ರಿಯೆ ಕುಡಿಯುವ ನೀರಿನ ಅವಶ್ಯಕತೆಯನ್ನು ಹೆಚ್ಚು ಮಾಡುವುದರೊಂದಿಗೆ ಕೊಳಚೆ ಚರಂಡಿ ನೀರಿನ ಸಮರ್ಪಕವಾದ ನಿಯಂತ್ರಣಕ್ಕೆ ದೊಡ್ಡ ತೊಡರನ್ನು ಉಂಟುಮಾಡಿದೆ. ನಗರದಲ್ಲಿ ಕುಡಿಯುವ ನೀರಿನ ಅವಶ್ಯಕತೆಯನ್ನು ಸಮರ್ಪಕವಾಗಿ ಪೂರೈಸಲು ಸಾಧ್ಯವಾಗದೆ ಜನರು ಅತಿಯಾದ ಮೌಲ್ಯವನ್ನು ನೀಡಿ ಸರಿಯಾದ ಶುದ್ಧೀಕರಣ ಪ್ರಕ್ರಿಯೆ ನಡೆಸದ ನೀರನ್ನು ಪಡೆದುಕೊಂಡು ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಕೃಷಿ ಪ್ರಧಾನವಾದ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಮೂಲಗಳು ಬತ್ತುವುದರೊಂದಿಗೆ ತಮ್ಮ ಜೀವನೋಪಾಯದ ಮಾರ್ಗವನ್ನು ಬದಲಿಸಬೇಕಾದ ಸಂದಿಗ್ಧ ಸ್ಥಿತಿಗೆ ಕೃಷಿಕರು ಬಂದು ಸೇರಿದ್ದಾರೆ. ಮುಂದೊಂದು ದಿನ ನೀರಿನ ವ್ಯಾಪಾರ ಅತ್ಯಂತ ದೊಡ್ಡ ಬೇಡಿಕೆ ಇರುವ ಹಾಗೂ ಕಷ್ಟ ಕೊಡಬೇಕಾಗಿರುವ ವ್ಯವಸ್ಥೆಯಾಗಿ ಎದುರಾಗುವುದು ಖಂಡಿತ.

               ಕುಡಿಯುವ ನೀರನ್ನು ಹೊರತುಪಡಿಸಿ ನೀರಿನ ಅವಶ್ಯಕತೆ ಭೂಮಿಯ ತಾಪಮಾನದ ನಿಯಂತ್ರಣದಲ್ಲಿಯೂ, ಋತುಗಳಿಗೆ ಅನುಸರಿಸಿ ಹವಾಮಾನ ಬದಲಾವಣೆಯಲ್ಲಿಯೂ ದೊಡ್ಡ ಪ್ರಭಾವವನ್ನು ಬೀರುತ್ತದೆ. ಮಳೆ ನೀರಿನ ಇಂಗು ಗುಂಡಿಗಳು ನೀರಿನ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಸ್ಥಾನವನ್ನು ವಹಿಸಿದರೂ ಕೂಡ, ಅವೈಜ್ಞಾನಿಕವಾಗಿ ನಿರ್ಮಿಸಲ್ಪಡುವ ಗುಂಡಿಗಳು ಗುಡ್ಡ ಜರಿತ ಮುಂತಾದ ಭೀಕರ ಪ್ರಾಕೃತಿಕ ಅಸಮತೋಲನಕ್ಕೆ ದಾರಿಮಾಡಿಕೊಡುತ್ತದೆ ಎಂಬುದನ್ನು ಮರೆಯಬಾರದು. ನೀರಿನ ಆಕಾರರಹಿತ ರುಚಿ ರಹಿತ ಪಾರದರ್ಶಕ ಗುಣವು ತಾಳ್ಮೆ ಸಹನೆ ಮುಂತಾದ ಭಾವನಾತ್ಮಕ ಸೆಲೆಗಳನ್ನು ಪ್ರತಿಬಿಂಬಿಸುವುದಾದರೂ, ನೀರಿನ ಇನ್ನೊಂದು ಮುಖ ಎದೆನಡುಗಿಸುವಂತದ್ದು ಎನ್ನುವುದನ್ನು ಮರೆಯಬಾರದು. 'ನಾರಿ ಮುನಿದರೆ ಮಾರಿ' ಎಂಬಂತೆ ನೀರು ಕೂಡ ಮಾನವನ ಅತಿಯಾದ ಸ್ವಾರ್ಥ ಹಾಗೂ ಅಹಂಕಾರ ಬುದ್ಧಿಯನ್ನು ನಿಯಂತ್ರಿಸುವುದಕ್ಕೆ ಕೆಲವೊಂದು ಬಾರಿ ಭೀಕರ ರೂಪವನ್ನು ತಾಳಿ ನೀರಿನ ಮೂಲಗಳಿಂದ ಸಿಡಿದೆದ್ದು ಬಂದು ಮಾನವನಿಗೆ ಸರಿದಾರಿಯಲ್ಲಿ ಸಾಗಲು ಎಚ್ಚರಿಸುತ್ತದೆ. ಸುನಾಮಿ ಅತಿವೃಷ್ಟಿ ನೆರೆ ಮುಂತಾದ ಪ್ರಾಕೃತಿಕ ಸವಾಲುಗಳು ಮಾನವನ ಅತಿಯಾದ ಆಧುನೀಕರಣದ ನಶೆಯಿಂದ ಸಾರ್ಥಕ್ಯದ ಬದುಕನ್ನು ನಡೆಸುವ ನಿಜವಾದ ಜೀವನ ವ್ಯಾಖ್ಯಾನವನ್ನು ತಿಳಿಸಿಕೊಡುತ್ತದೆ.

ಕೊನೆಯಲ್ಲಿ ಔಚಿತ್ಯ

                ಪರಿಸರವನ್ನು ಅದರ ನೈಜತೆಯಲ್ಲಿ ಉಳಿಸಿಕೊಂಡು ಅವಶ್ಯಕ ಆಮ್ಲಜನಕವನ್ನು ಪಡೆಯಲು ಸಸ್ಯಸಂಕುಲವನ್ನು ಸಮೃದ್ಧಗೊಳಿಸಲು ನೀರನ್ನು ಮಿತವಾಗಿ ಅವಶ್ಯಕತೆಗೆ ತಕ್ಕಂತೆ ಬಳಸಬೇಕಾದ ನಾಜೂಕುತನವನ್ನು ಜನರು ಅನುಸರಿಸಬೇಕಾಗಿದೆ. ನೀರು ಕೇವಲ ಉಪಯೋಗಿಸುವುದಕ್ಕೆ ಇರುವುದಲ್ಲ, ಉಪಯೋಗದ ಮಹತ್ವವನ್ನು ತಿಳಿದು ನಾಜೂಕಾಗಿ ಬಳಸಿಕೊಂಡು ಮುಂದಿನ ಪೀಳಿಗೆಗೆ ನೀರು ಇಷ್ಟೇ ಅಗ್ಗವಾಗಿ ಲಭಿಸುವಂತೆ ಮಾಡುವುದು, ನಾವು ನಮ್ಮ ಹಿರಿಯರ ನಾಜೂಕುತನದಿಂದಾಗಿ ಪಡೆದು ನೀರನ್ನು ಬಳಸಿದ್ದಕ್ಕೆ ಕೊಡಬೇಕಾದ ನಿಜವಾದ ಸಂಭಾವನೆ. ಎಲ್ಲರೂ ಈ ತತ್ವವನ್ನು ಅನುಸರಿಸಿ ಲೋಕದ ಹಿತಕ್ಕಾಗಿ ಸಾಧ್ಯವಾದಷ್ಟು ನೀರಿನ ಮಹತ್ವವನ್ನು ಅರಿತು ಇತರರಿಗೆ ಈ ಬಗ್ಗೆ ಎಚ್ಚರಿಸಿ ಮುಂದುವರಿಯಬೇಕು.

-CSUO.Abhishek A

-CDT.Thanvi M

NMC-NCC-Sullia

National Cadet Corps, Nehru Memorial College Sullia Unit, Under 19 Karnataka Battalion Madikeri. The National Cadet Corps is the youth wing of the Indian Armed Forces with its headquarters in New Delhi, which trains and motivates the youth of our country to become a disciplined person and help him join the armed forces if he wishes to.

No comments:

Post a Comment