ನಾವು ದಿನಾಂಕ ೨೬/೧೦/೨೦೨೧ ರಂದು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಮ್ಮ NCC Camp ಗೆ ಪ್ರಯಾಣ ಹೊರಟೆವು. ಅದು ನನ್ನ ಎರಡನೇಯ CATC ಕ್ಯಾಂಪ್.
ನಾವು ಮಧ್ಯಾಹ್ನದ ವೇಳೆಗೆ ಮೂಡಬಿದಿರೆ ತಲುಪಿದೆವು. ಅಲ್ಲಿ ನಮ್ಮ NCC Senior Cadet ಗಳು ನಮ್ಮನ್ನು ಸ್ವಾಗತಿಸಿದರು. ಅಲ್ಲಿ RDC camp selection ಗೆ ಬಂದಿದ್ದ ಬೇರೆ ಬೇರೆ ಕಾಲೇಜಿನ Cadet ಗಳಿಗೆ ನಮ್ಮ ಪರಿಚಯ ಮಾಡಿಕೊಟ್ಟರು.
ನಂತರ ನಮ್ಮನ್ನು campಗೆ ದಾಖಲು ಮಾಡಲಾಯಿತು. ಮತ್ತೆ ೫ ಗುಂಪು ಮಾಡಲಾಯಿತು. ಅದರಲ್ಲಿ Charli ನಮ್ಮ ಗುಂಪು. ನಂತರ ಆ ದಿನ ರಾತ್ರಿಯ ಊಟ ಮುಗಿಸಿ, ನಾವು ನಮ್ಮ ಲಗೇಜ್ ಹಿಡಿದುಕೊಂಡು ಉಳಿದುಕೊಳ್ಳುವ ವಿದ್ಯಾರ್ಥಿನಿಲಯಕ್ಕೆ ಹೊರಟೆವು. ನಾನು ಹಾಗೂ ನನ್ನ ಕಾಲೇಜಿನ ಇತರ ಮೂವರು NCC ಗೆಳೆಯರು ಒಟ್ಟಿಗೆ ಒಂದೇ ಗುಂಪು ಆದರಿಂದ ನಾವು ವಿದ್ಯಾರ್ಥಿ ನಿಲಯದ ಒಂದೇ ಕೋಣೆಯಲ್ಲಿ ಉಳಿದು ಕೊಂಡೆವು. ಅಂದು ನಮ್ಮ ಕೆಲಸವನ್ನು ಮುಗಿಸಿ, ಮರುದಿನ ಬೆಳಿಗ್ಗೆ PT ತರಗತಿ ಇದ್ದ ಕಾರಣ ಬೇಗನೆ ಮಲಗಿದ್ದೆವು. ಬೆಳಿಗ್ಗೆ ೪.೩೦ಕ್ಕೆ ಎದ್ದು, ಎಲ್ಲಾ ರೀತಿಯ ಚಟುವಟಿಕೆ ಮುಗಿಸಿ ೫.೪೫ಕ್ಕೆ PTಗೆ ತೆರೆಳಿದೆವು. ಅದರಲ್ಲಿ ವ್ಯಾಯಾಮ, ಓಟ ನಂತರ ೭.೩೦ಕ್ಕೆ ಬೆಳಿಗ್ಗೆಯ ಉಪಹಾರ. ಮತ್ತೆ NCC ಉಡುಪು ಧರಿಸಿ ಬಂದು 2 ಗಂಟೆ ಕಾಲ Drill, ನಂತರ ೧೧.೩೦ಕ್ಕೆ ಟೀ... ನಂತರ ತರಗತಿಗಳಲ್ಲಿ ಪಾಠ ೧೨.೩೦ ರತನಕ ಮತ್ತೆ ಊಟ ಮುಗಿಸಿ NCC ಉಡುಪು ತೆಗೆದು PT ಉಡುಪಿನಲ್ಲಿ ೩.೦೦ ಗಂಟೆ ಸುಮಾರಿಗೆ ಮೈದಾನದಲ್ಲಿ ಥಿಯರಿ ತರಗತಿ... ನಂತರ ಟೀ... ಪುನಃ ಮೈದಾನದಲ್ಲಿ ಆಟ... ಅದರ ಬಳಿಕ ಬಂದು ಕ್ಯಾಂಪ್‌ನ ಕೊನೆಯ ದಿನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನೃತ್ಯ, ಮೊದಲಾದ ತಯಾರಿ... ಅದಾದ ಮೇಲೆ ರೋಲ್ ಕಾಲ್ ಪರೇಡ್, ಕೊನೆಯಲ್ಲಿ ರಾತ್ರಿಯ ಊಟ. ಆಹಾರದ ಬಗ್ಗೆ ಹೇಳಬೇಕೆಂದರೆ ಸಸ್ಯಾಹಾರ ಮತ್ತು ಮಾಂಸಾಹಾರ ಎರಡು ಬಗೆಯ ಆಹಾರವಿತ್ತು. ಬೆಳಿಗ್ಗೆ ಇಡ್ಲಿ , ಪೂರಿ, ಸಾರು, ಚಟ್ನಿ, ಅವಲಕ್ಕಿ, ಬಾಳೆ ಹಣ್ಣು, ೨ ಮೊಟ್ಟೆ, ಐಸ್ಕ್ರೀಮ್, ಟೀ.... ೧೧ ಗಂಟೆಗೆ ಬಿಸ್ಕೇಟ್-ಚಹಾ... ಮಧ್ಯಾಹ್ನದ ವೇಳೆಗೆ... ಊಟ,ಸಾರು,ಪಲ್ಯ, ಪನೀರ್,ಮೊಟ್ಟೆ ಸಾರು, ಚಿಕನ್ ಐಸ್ಕ್ರೀಮ್... ೫ ಗಂಟೆ ಸುಮಾರಿಗೆ ಬನ್, ಟೀ... ರಾತ್ರಿ ವೇಳೆಗೆ ಊಟ, ಸಾರು, ಪಲ್ಯ, ಪನೀರ್, ಮೊಟ್ಟೆ ಸಾರು, ಚಿಕನ್, ಐಸ್ಕ್ರೀಮ್...
ಮತ್ತೆ ಕ್ಯಾಂಪ್ ಬಗ್ಗೆ ಹೇಳಬೇಕೆಂದರೆ ಸುಮಾರು ಹೊಸ ಹೊಸ ಗೆಳೆಯರ ಪರಿಚಯವಾಯಿತು. ಕ್ಯಾಂಪ್‌ನಲ್ಲಿ Army ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ಮತ್ತೆ ಫೈರಿಂಗ್ ಕಾಂಪಿಟೇಶನ್ ಇತ್ತು. ಅದು ನನಗೆ ತುಂಬಾ ಇಷ್ಟ ಆಯ್ತು. ಅದರಲ್ಲಿ ಮೊದಲ ಸುತ್ತಿನಲ್ಲಿ ನನಗೆ 39 ಅಂಕ ಪಡೆದು ನಂತರ ಕೊನೆಯ ಸುತ್ತಿನಲ್ಲಿ ೩೦ ಅಂಕ ಪಡೆದೆ... ಹಗ್ಗಜಗ್ಗಾಟ ಸ್ಪರ್ಧೆ ಏರ್ಪಟ್ಟಿತ್ತು. ಅದರಲ್ಲಿ ನಮಗೆ ದ್ವಿತೀಯ ಬಹುಮಾನ. ನಂತರ ವಾಲಿಬಾಲ್‌ನಲ್ಲಿ ಪ್ರಥಮ ಬಹುಮಾನ ದೊರಕಿತ್ತು. ಕ್ಯಾಂಪ್‌ನಲ್ಲಿ ಆರ್ಮಿಗೆ ಸಂಬಂಧಿಸಿದ "ಶೇರ್ ಷಾ" ಸಿನಿಮಾವನ್ನು ನಮಗೆ ಪ್ರದರ್ಶಿಸಿದರು. ಅದನ್ನು ನೋಡಿ ನನಗೆ ಕಣ್ಣಿನಲ್ಲಿ ನೀರು ತುಂಬಿ ಬಂತು. ಹಾಗೆ ಇಷ್ಟು ಕಾಲ ಸಿಗದಂತಹ ಒಂದು ಉತ್ತಮವಾದ ಕ್ಯಾಂಪ್ ಅನುಭವ ದೊರಕಿತ್ತು. ಮೊದಲಿನ ನಾಲ್ಕು ದಿನಗಳು ದಿನವೇ ಹೋಗುತ್ತಿರಲಿಲ್ಲ; ಕೊನೆಯ ದಿನಗಳು ಕಳೆಯುತ್ತಿದ್ದಂತೆ ಕ್ಯಾಂಪ್ ಬಿಟ್ಟು ಬರಲು ಮನಸೇ ಆಗುತ್ತಿರಲಿಲ್ಲ. ಹಾಗೂ ಅಲ್ಲಿ ನೆರೆದಿದ್ದ ಎಲ್ಲಾ ANO sir & Army officer's ಉತ್ತಮ ರೀತಿಯಲ್ಲಿ ನಮ್ಮೊಂದಿಗೆ ಇರುತ್ತಿದ್ದರು. ಯಾವುದೇ ಸಂದರ್ಭ ಅಂದರೆ ಆಟದ ಸಂದರ್ಭ ವಾಗಿರಬಹುದು ಪಾಠದ ಸಂದರ್ಭ ವಾಗಿರಬಹುದು ನಮ್ಮೊಂದಿಗೆ ಆಟವಾಡುತ್ತಾ ಪಾಠ ಮಾಡುತ್ತಾ ಅವರು ಆರ್ಮಿಗೆ ಜಾಯಿನ್ ಆದ ಕಥೆಯನ್ನು ಹೇಳುತ್ತಾ ಇದ್ದರು. ಅಪಾರವಾದ ಪ್ರೀತಿಯನ್ನು ತೋರಿಸುತ್ತಿದ್ದರು. ಇಂತಹ ಅನುಭವ ನನಗೆ ದೊರಕಿದ್ದು ನನ್ನ ಒಂದು ಭಾಗ್ಯ ಎನ್ನಬಹುದು. ಅಲ್ಲಿ ಆದ ಅನುಭವ ಹೇಳಲು ನನಗೆ ಮಾತುಗಳು ಸಾಲದು. ಅಲ್ಲಿ ಎಲ್ಲರು ಒಂದಾಗಿ ಆಟವಾಡುತ್ತಾ ಎಲ್ಲರೊಂದಿಗೆ ಪಾಠಹೇಳುತ್ತ ಕಳೆದ ಕಾಲ ಮತ್ತೆಬಾರದು.... Jai Hind..!
- SGT. Mithun DV, NMC Sullia
No comments:
Post a Comment