"ಎನ್ ಸಿ ಸಿ ವಿದ್ಯಾರ್ಥಿ ಜೀವನದಲ್ಲಿ RDC ಒಂದು ಸಾಧನೆ, ಆದರೆ ಆ
ಸಾಧನೆಯ ಮೆಟ್ಟಿಲು ಏರುವುದು ವಿದ್ಯಾರ್ಥಿಗಳ ಪ್ರಯತ್ನದ ಜೊತೆಗೆ ಲಕ್
ಅವಶ್ಯವಾಗಿರುತ್ತದೆ."
ಅಕ್ಟೋಬರ್
16 ರಿಂದ ಪ್ರಾರಂಭವಾಗುವ RDC ಕ್ಯಾಂಪ್ಗೆ ಮೊದಲ ಹಂತದ ಆಯ್ಕೆಯೂ ಕಾಲೇಜಿನಲ್ಲಿ
ಮಾಡಲಾಯಿತು, ಇದರಲ್ಲಿ 30 ಕೆಡೆಟ್ಳಲ್ಲಿ 11 ಕೆಡೆಟ್ ಆಯ್ಕೆಯಾದರೂ, ನಂತರ ಒಂದು ತಿಂಗಳ
ಕಾಲ ಹವಾಲ್ದಾರ್ ವಿಕಾಸ್ ತಾಪ ಹಾಗೂ ಕೃತೇಷ್ ಎಂ ಸಿ(RDC-2018) ಇವರ ನೇತೃತ್ವದಲ್ಲಿ
ಒಂದು ತಿಂಗಳ ತರಬೇತಿ ಮುಗಿಸಿ ನಂತರ ಮಡಿಕೇರಿ ಬೆಟಾಲಿಯನ್ ಇದರಲ್ಲಿ ಎರಡು ಹಂತದ
ಆಯ್ಕೆಯನ್ನು ಮುಗಿಸಿದೆವು. ಈ ಆಯ್ಕೆಯಲ್ಲಿ ಸುಮಾರು 250 ರಿಂದ 300 ಕೆಡೆಟ್ ಗಳು
ಇದ್ದರು. ಆದರೆ ಮೂಡಬಿದರೆಯಲ್ಲಿ ನಡೆಯುವ ಕ್ಯಾಂಪ್ ಗೆ 19ನೇ KAR ಮಡಿಕೇರಿಯಿಂದ 47
ಕೆಡೆಟ್ ಆಯ್ಕೆ ಮಾಡಲಾಯಿತು. ನಮ್ಮ ಕಾಲೇಜಿನಿಂದ 9 ಮಂದಿ ಆಯ್ಕೆಯಾಗಿದ್ದರು. ಈ ಆಯ್ಕೆಯ
ನಂತರ ನಾಲ್ಕು ದಿನ ಕ್ರಮೇಣವಾಗಿ ಮಡಿಕೇರಿಯ ಬೆಟಾಲಿಯನ್ ನಲ್ಲಿ ತರಬೇತಿಯನ್ನು
ಪಡೆಯಲಾಯಿತು, ಸುಮಾರು ಬೆಳಗ್ಗೆ 9:00 ರಿಂದ ಸಂಜೆ 3.00 ಅಥವಾ 4.00 ರ ವರೆಗೆ ಅಭ್ಯಾಸ
ನಡೆಯುತ್ತಿತು.
18 KAR BN NCC ಮಂಗಳೂರು ಬೆಟಾಲಿಯನ್ ಆಯೋಜಿಸಿದ PRE-IGC-1 ಕ್ಯಾಂಪ್ ದಿನಾಂಕ
16/10/2021 ರಂದು ಬೆಳಗ್ಗೆ 8.30 ಕ್ಕೆ ಸುಳ್ಯದಿಂದ ಪುತ್ತೂರಿನ ಮೂಲಕ ಆಳ್ವಾಸ್
ಮೂಡಬಿದಿರೆಗೆ ಪ್ರಯಾಣ ಆರಂಭವಾಯಿತು. ಪುತ್ತೂರು ತಲುಪಿದ ನಂತರ vc ಕೆಡೆಟ್ ಗಳೊಂದಿಗೆ
ಸೇರಿ 19 KAR BN NCC ಮಡಿಕೇರಿಯ ಎಲ್ಲಾ ಕೆಡೆಟ್ ಗಳು ಒಂದು ಬಸ್ಸಿನ ಮೂಲಕ Lt. ಅತುಲ್
ಹಾಗೂ ಹವಾಲ್ದಾರ್ ವಿಕಾಸ್ ತಾಪ ರೊಂದಿಗೆ ಆಳ್ವಾಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ಯಾಂಪ್
ಗೆ ತಲುಪಿದೆವು. ನಂತರ ಪತ್ರಗಳನ್ನು ಪರಿಶೀಲಿಸಿ ಭೋಜನದ ವ್ಯವಸ್ಥೆಯನ್ನು ಮಾಡಿದರು,
ಊಟ ಅದಾದ ಬಳಿಕ SWs ಗೋದಾವರಿ A Block ಎಂಬ ವಿದ್ಯಾರ್ಥಿನಿಲಯವನ್ನು ನೀಡಿದರು ಹಾಗೆಯೇ
SDs ಗೆ ಶೇಷಾದ್ರಿ ಎಂಬ ವಿದ್ಯಾರ್ಥಿನಿಲಯವನ್ನು ನೀಡಿದರು, ನಮ್ಮ ಕಾಲೇಜಿನಿಂದ
ಆಯ್ಕೆಯಾದ 4SDsಗೆ 406 ರೂಮಿನಲ್ಲಿ ಜೊತೆಗೆ ಉಳಿಯಲು ಅವಕಾಶ ದೊರಕಿತು. ಅವತ್ತಿನ ದಿನದ
ಎಲ್ಲಾ ಕಾಲವನ್ನು ವಿಶ್ರಾಂತಿಯಲ್ಲಿ ಕಳೆದೆವು. ಮರುದಿನ ಮುಂಜಾನೆಗೆ ANOಹಾಗೂ PI
ಸ್ಟಾಫ್ ಅವರ ಆದೇಶದ ಮೇರೆಗೆ 05.45 ರ ಹೊತ್ತಿಗೆ ವಿದ್ಯಾರ್ಥಿನಿಲಯದ ಮುಂದೆ fallin
with weapons and uniforms. ನಂತರ ಸರಿಯಾಗಿ ಬೆಳಗ್ಗೆ 6.00- 7.10 ವರಗೆ ಪಿಟಿ
ಇದರಲ್ಲಿ ಎರಡು ಕಿಲೋ ಮೀಟರ್ ಓಟ, ಯೋಗಾಸನ, ಎಕ್ಸಸೈಜ್ ಇರುತ್ತಿತ್ತು. ಇದಾದ ಬಳಿಕ 7-
10 ರಿಂದ 8-15ರವರೆಗೆ ಉಪಹಾರ ಹಾಗೂ ವಸ್ತ್ರದ ಬದಲಾವಣೆ ಹಾಗೆ 8.30 ರಿಂದ 10.30ರವರೆಗೆ
ಡ್ರಿಲ್ ಅಭ್ಯಾಸ ನಂತರ 10.30 ರಿಂದ 11ರವರೆಗೆ ಚಹಾದ ವಿರಾಮ 11.00 ರಿಂದ 1.00ರ ವರಗೆ
ಡ್ರಿಲ್ ಅಭ್ಯಾಸ ಅದಾದನಂತರ 1.00 ರಿಂದ 2:45 ಊಟದ ವಿರಾಮ ಹಾಗೂ ವಿಶ್ರಾಂತಿಯ ಸಮಯ
02:45 4.00 ಗಂಟೆಯವರೆಗೆ ಡ್ರಿಲ್ ಅಭ್ಯಾಸವನ್ನು 4.00 ರಿಂದ 7.00 ಗಂಟೆಯವರೆಗೆ
ಸಂಸ್ಕೃತಿ ಕಾರ್ಯಕ್ರಮದ ಅಭ್ಯಾಸ ಇದಾದ ಬಳಿಕ 7.00ಗಂಟೆಗೆ ಎಲ್ಲರೂ fall in
ಆಗುತ್ತಿದ್ದರು. ಅದಾದನಂತರ ರಿಪೋರ್ಟಿಂಗ್, ಪ್ರಾರ್ಥನೆ ಹಾಗೆಯೇ ಊಟ ನಂತರ ಸುಮಾರು 8.30
ರ ಹೊತ್ತಿಗೆ ವೆಪನ್ ಜೊತೆಗೆ ರೂಮಿಗೆ ಕೆರಳುತ್ತಿದ್ದೆವು, ನಂತರ ಫ್ರೆಶ್ ಅಪ್ ಐರನ್
ಹಾಗೆಯೇ ಬಟ್ಟೆ ವಾಶ್ ದಿನದ ಕೆಲಸಗಳೆಲ್ಲಾಗಿ ಮಲಗುವ ಸಮಯ ಸುಮಾರು 11 ರಿಂದ 11:30
ಆಗುತ್ತಿತ್ತು ಅದಾದ ಬಳಿಕ 4:30 ರಿಂದ ದಿನನಿತ್ಯದ ಚಟುವಟಿಕೆಗಳು ಆರಂಭವಾಗುತ್ತಿತ್ತು.
ಹೀಗೆ ಮೊದಲ ನಾಲ್ಕು ದಿನಗಳು ಅಭ್ಯಾಸ ನಡೆಯುತ್ತಿತ್ತು, ನಮಗೆ ಹವಲ್ದಾರ್ ವಿಕಾಸ ಹಾಗೂ
ಶಿಜುರವರು ತರಬೇತಿಯನ್ನು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿಸುತ್ತಿದ್ದರು. ನಂತರ ಮೊದಲ
ಹಂತದ ಆಯ್ಕೆಯ ಪ್ರಕ್ರಿಯೆ ಆರಂಭವಾಯಿತು ಆಯ್ಕೆ ಸಮಿತಿಯಲ್ಲಿ,19 KAR BN NCC ಮಡಿಕೇರಿ
CO.ಚೇತನ್ ದಿಮಾನ್ ,18 KAR ನ CO. N R ಬಿಡೇ, ಹಾಗೆಯೇ 21 KAR CO. R K ಸಿಂಗ್, Lt.
colonel ಅಮಿತಾಬ್, ಭರತ್ ಕುಮಾರ್, ಅನಿಲ್ ಕೌಶಿಕ್, ಹೀಗೆ ಮುಖ್ಯಸ್ಥರು
ಉಪಸ್ಥಿತರಿದ್ದರು ಇದರಲ್ಲಿ ಸುಮಾರು 300 ಕೆಡೆಟ್ ಗಳಲ್ಲಿ 97 ಎಡಿಟ್ ಗಳನ್ನು ಆಯ್ಕೆ
ಮಾಡಿದರು ಇದರಲ್ಲಿ ನಮ್ಮ ಕಾಲೇಜಿನ 4SDs ಮತ್ತು1SWs ಆಯ್ಕೆಯಾಗಿದ್ದರು.
ಇದಾದ
ಬಳಿಕ ದಿನನಿತ್ಯದ ಚಟುವಟಿಕೆಯಲ್ಲಿ ಬದಲಾವಣೆ ಹಾಗೂ ಹೆಚ್ಚಿನ ಅಭ್ಯಾಸಗಳು ಆರಂಭವಾದವು,
ನಮಗೆ ತರಬೇತುದಾರರಾಗಿ ಪೆಷಲ್ ಸಾಬ್ ,ತಾಷಿ, ವಿಕಾಸ್ ತಾಪ ಸಾಬ್ ನೇಮಕ ಆಗಿದ್ದರು. ಹೀಗೆ
ತರಬೇತಿ ನಡೆದ ನಂತರ ಎರಡನೇ ಹಂತದ ಆಯ್ಕೆ ನಡೆಯಿತು. ಇದರಲ್ಲಿ ಸುಮಾರು 97
ಕೆಡೆಟ್ಳಲ್ಲಿ 57 ಕೆಡೆಟ್ ಆಯ್ಕೆ ಮಾಡಲಾಯಿತು ,ಇದರಲ್ಲಿ ನಮ್ಮ ಕಾಲೇಜಿನ 4SDsಹಾಗೂ
1SWs ಆಯ್ಕೆಯಾಗಿದ್ದರು. ಮಂಗಳೂರಿನ ಬೆಟಾಲಿಯನ್ ಆಯೋಜಿಸಿದ ಹತ್ತು ದಿನದ ಕ್ಯಾಂಪಿನಲ್ಲಿ
ಉಪಹಾರಕ್ಕೆ ಅವಲಕ್ಕಿ, ಇಡ್ಲಿ ,ಮೊಟ್ಟೆ, ಬಾಳೆಹಣ್ಣು ,ಬನ್, ಬಿಸ್ಕೆಟ್, ಊಟಕ್ಕೆ
ಮಾಂಸಾಹಾರಿ ಹಾಗೂ ಸಸ್ಯಾಹಾರಿ ಊಟ ಇತ್ತು.
ಇದರಲ್ಲಿ
ವಿಶೇಷ ಎಂದರೆ ಬೆಟಾಲಿಯನ್ ನಡುವಿನ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ನಮ್ಮ ಬೆಟಾಲಿಯನ್
ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಇದರಲ್ಲಿ ನಮ್ಮ ಕಾಲೇಜಿನ 4sws ಹಾಗೂ 2SDs
ಭಾಗವಹಿಸಿದ್ದರು.
Pre-IGC-2
ಎರಡನೇ ಕ್ಯಾಂಪನ್ನು 21 KAR BN NCC ಉಡುಪಿ ಬೆಟಾಲಿಯನ್ ಆಯೋಜಿಸಿದ್ದರು.
ಕ್ಯಾಂಪಿನಲ್ಲಿ ಎರಡು ದಿನದ ಅಭ್ಯಾಸದ ನಂತರ ಮೂರನೇ ಹಂತದ ಆಯ್ಕೆಯನ್ನು ಮಾಡಲಾಯಿತು.
ಇದರಲ್ಲಿ 57 ಕೆಡೆಟ್ ಗಳಿಂದ 43 ಕೆಡೆಟ್ ಗಳನ್ನು ಆಯ್ಕೆ ಮಾಡಲಾಯಿತು. ಇದಾದ ಬಳಿಕ
ಹೆಚ್ಚಿನ ತರಬೇತಿ ಮತ್ತು ಇದರ ಮುಖ್ಯ ಜವಾಬ್ದಾರಿಯನ್ನು Lt. Col R K ಸಿಂಗ್ ಅವರು
ಹೊಂದಿದ್ದರೂ ಇವರು ತಮ್ಮ ತಪ್ಪುಗಳನ್ನು ಪರಿಶೀಲಿಸಿ ಅದನ್ನು ನೊಂದಾವಣಿ
ಮಾಡಿಕೊಳ್ಳುತ್ತಿದ್ದರು. ಈ ಕ್ಯಾಂಪಿನಲ್ಲಿ ಲೈನ್ ಏರಿಯಾ ಫ್ಲಾಗ್ ಏರಿಯಾ ಚಟುವಟಿಕೆಗಳು
ಕೂಡ ಆರಂಭವಾದವು ಇಲ್ಲಿ ಕೂಡ ಉಪಹಾರಕ್ಕೆ ಮಂಗಳೂರಿನ ಬೆಟಾಲಿಯನ್ ಆಯೋಜಿಸಿದಂತೆ ಉತ್ತಮ
ರೀತಿಯಲ್ಲಿ ಇತ್ತು. ಈ ಹತ್ತು ದಿನಗಳಲ್ಲಿ ಉತ್ತಮ ರೀತಿಯಲ್ಲಿ ಡ್ರಿಲ್ ಅಭ್ಯಾಸ ನಡೆದವು.
Pre-IGC
-3 ಕ್ಯಾಂಪನ್ನು 20 KAR ಶಿವಮೊಗ್ಗ ಬೆಟಾಲಿಯನ್ ರವರು ಆಯೋಜಿಸಿದ್ದರು. ಇದರಲ್ಲಿ
ಬೆಂಗಳೂರಿನಲ್ಲಿ ನಡೆಯುವ Pre-RDC -1 ಆಯ್ಕೆಯ ಹಂತವು ನಡೆದಿತ್ತು. ಹಾಗೆ ಇದರಲ್ಲಿ
ಮೊದಲು ತರಬೇತುದಾರರಾಗಿ ಪೆಷಲ್ ಸಾಬ್ ರವರು ಬೆಟಾಲಿಯನ್ ಗೆ ತೆರಳಿದ ಕಾರಣ ತಮಗೆ
ತರಬೇತುದಾರರಾಗಿ ನಾಗೇಂದ್ರ ದಿಮಾನವರು ಆಯ್ಕೆಯಾದರು .ಮೂರನೇ ಹಂತದ ಆಯ್ಕೆಯಲ್ಲಿ
43ಕೆಡೆಟ್ಗಳಿಂದ 34 ಕೆಡೆಟ್ಗಳನ್ನು ಬೆಂಗಳೂರಿನಲ್ಲಿ ನಡೆಯುವ Pre-RDC- 1ಕ್ಯಾಂಪ್
ಆಯ್ಕೆ ಮಾಡಲಾಯಿತು .ಈ ಆಯ್ಕೆಯಾದ ಬಳಿಕ ಮಂಗಳೂರಿನ ಗ್ರೂಪ್ ಕಮಾಂಡರ್ R K ಶರ್ಮರವರು
ನಮ್ಮ ಡ್ರಿಲ್ ಅನ್ನು ವೀಕ್ಷಿಸಿದರು ಹಾಗೂ ನಮಗೆ ಶುಭ ಹಾರೈಸಿದರು.
ಆಳ್ವಾಸ್ ಮೂಡಬಿದರೆ ಯಲ್ಲಿ ನಡೆದ 30 ದಿನಗಳ ಕ್ಯಾಂಪಿನಲ್ಲಿ ಉತ್ತಮ ರೀತಿಯ ಬಾಂಧವ್ಯದ ಜೊತೆಗೆ ಉತ್ತಮ ಸ್ನೇಹ ಸಂಬಂಧಗಳು ಸುಖ-ದುಃಖಗಳು ಎಲ್ಲವೂ ಅಡಗಿದ್ದವು.
ಮಂಗಳೂರು
ತಂಡದಿಂದ ನಾವು ಮುಂದಿನ ಹಂತದ ಕ್ಯಾಂಪ್ ಗೆ(Pre-RDC 1 ) 34 ಜನ ಕೆಡೆಟ್
ಆಯ್ಕೆಯಾಗಿದ್ದರು ಅದರಲ್ಲಿ ನಮ್ಮ ಆರ್ಮಿವಿಂಗ್ ಯಿಂದ 12 ಜನ SDs ಆಯ್ಕೆಯಾಗಿದ್ದರು
ಅದರಲ್ಲಿ ನಾನು ಮತ್ತು ಅಭಿಷೇಕ್ ಆಯ್ಕೆಯಾಗಿರುವುದು ನಮಗೆ ಖುಷಿ ತರುವಂತಹ
ವಿಷಯವಾಗಿತ್ತು.
ನಮ್ಮ ಮುಂದಿನ
ಕ್ಯಾಂಪ್ ಬೆಂಗಳೂರಿನ ಯಲಹಂಕದ ಬೃಂದಾವನ ಕಾಲೇಜಿನಲ್ಲಿ ನಿಯೋಜಿಸಲ್ಪಟ್ಟಿದ್ದರು. ಇದರ
ಸಂಪೂರ್ಣ ಜವಾಬ್ದಾರಿಯನ್ನು 4 KAR ತುಮಕೂರು ಬೆಟಾಲಿಯನ್ ಅದಾಗಿತ್ತು.
ನಾವು
ದಿನಾಂಕ 13- 11- 2021ರ ರಾತ್ರಿ ಸುಮಾರು10.30 ಹೊತ್ತಿಗೆ ಆಳ್ವಾಸ್ ಮೂಡಬಿದರೆ ಇಂದ
ಹೊರಟು 14 -11- 2021ರ ಬೆಳಗ್ಗೆ ಸುಮಾರು 7.30ಕೆ ಬೆಂಗಳೂರಿನ ಯಲಹಂಕದ ಬೃಂದಾವನ
ಕಾಲೇಜಿಗೆ ತಲುಪಿದೆವು. ಅಲ್ಲಿ ನಮ್ಮ ಕರ್ನಾಟಕದವರಾದ JCO
ಕೃಷ್ಣಪ್ಪರವರು ನಮ್ಮನ್ನು ಬರಮಾಡಿಕೊಂಡರು ಮುಂಜಾನೆಯಲ್ಲಿ ನಮ್ಮ ಡಾಕ್ಯುಮೆಂಟನ್ನು
ಪರಿಶೀಲಿಸಿದ ನಂತರ ಸುಮಾರು 12.30 ಕೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯಾಗಿತ್ತು ನಂತರ ಊಟ
ಮಾಡಿ ರೂಮ್ ಗೆ ತೆರಳಿದೆವು. ಅಲ್ಲಿ ನಮ್ಮ ಮಂಗಳೂರಿನ ಗುಂಪಿನ SDs ಗೆ ರೂಮ್
ನೀಡಿದ್ದರು ಅದರಲ್ಲಿನ ದಿನದ ವಿಶ್ರಾಂತಿಯನ್ನು ಪಡೆದು ಸುಮಾರು 2:45 ಕೆ ಸೀನಿಯರ್
ಆದೇಶದ ಮೇರೆಗೆ ಅಭ್ಯಾಸಕ್ಕೆ ಹೋದೆವು ಅಲ್ಲಿ ನಮ್ಮ ಮೊದಲ ದಿನದ ಅಭ್ಯಾಸ ಆರಂಭವಾಯಿತು.
ನಮಗೆ ತರಬೇತುದಾರರಾಗಿ ನಾಗೇಂದ್ರ ದಿಮಾನ್ ಹಾಗೂ ಸುದೇಶ್ ಥೋಮಸ್ ರವರು
ಆಯ್ಕೆಯಾಗಿದ್ದರು. ಸುಮಾರು 6:00 ಗಂಟೆ ತನಕ ಅಭ್ಯಾಸ
ನಡೆಸಿದೆವು ಅದಾದ ಬಳಿಕ ರೂಮ್ ಸೇರಿದೆವು ನಂತರ ಸಂಜೆ 6.00 ಗಂಟೆಯಿಂದ 8.00 ರವರೆಗೆ
ಸಾಂಸ್ಕೃತಿಕ ಕಾರ್ಯಕ್ರಮದ ಅಭ್ಯಾಸವನ್ನು ನಡೆಸುತ್ತಿದ್ದೆವು. ಅದಾದ ಬಳಿಕ 8:00 ಗಂಟೆಗೆ
ಊಟದ ವ್ಯವಸ್ಥೆ ಆಗುತ್ತಿತ್ತು ಊಟದ ನಂತರ ರೂಮಿಗೆ ತೆರಳಿ ಫ್ರೆಶ್ ಅಪ್ ಆಗಿ,
ಯೂನಿಫಾರ್ಮ್ ಸೆಟ್ ಮಾಡಿದ ನಂತರ ಮನೆಗೆ ಕರೆ ಮಾಡಿ ಸುಮಾರು 11.30 ಕೆ ಮಲಗಿದ್ದೆವು,
ಮರುದಿನ ಬೆಳಗ್ಗೆ ಸುಮಾರು 5.30 ಕೆ ಎದ್ದು ಫ್ರೆಶ್ ಅಪ್ ಆಗಿ 6.00 ರ ಹೊತ್ತಿಗೆ
fall-in ಆದೆವು. ಬೆಳಗ್ಗೆ 6.00-7.10 ರವರ ಗೆ ಪಿಟಿ ಆದನಂತರ 7.10 ರಿಂದ 8.00 ಚಹಾದ
ಸಮಯ ನಂತರ ದಿನದ ಡ್ರಿಲ್ ಅಭ್ಯಾಸವು 8.00ಗಂಟೆಗೆ ಆರಂಭವಾಗುತ್ತಿತ್ತು, 8 ಗಂಟೆಯಿಂದ
10.30 ತನಕ ಡ್ರಿಲ್ಅಭ್ಯಾಸ ಅದಾದನಂತರ 10.30 ರಿಂದ 11ರ ತನಕ ಚಹಾದ ವಿರಾಮ, 11
.00ಗಂಟೆಯಿಂದ 1.00ಗಂಟೆ ತನಕ ಮತ್ತೆ ಡ್ರಿಲ್ ಅಭ್ಯಾಸ ಅನಂತರ 1.00 ಗಂಟೆಯಿಂದ
ಮಧ್ಯಾಹ್ನದ ಭೋಜನ, 1.00 ರಿಂದ 2.30ರವರೆಗೆ ವಿರಾಮ ಹಾಗೆಯೇ 2.30 ರಿಂದ 4 ಗಂಟೆ ತನಕ
ಡ್ರಿಲ್ ಅಭ್ಯಾಸ4.00 ರಿಂದ 8.00ರ ತನಕ ಸಾಂಸ್ಕೃತಿಕ ಕಾರ್ಯಕ್ರಮದ ಅಭ್ಯಾಸ, 8.00ಗಂಟೆ
ಗೆ ರೋಲ್ ಕಾಲ್ ರಿಪೋರ್ಟಿಂಗ್ ಇರುತ್ತಿತ್ತು. ನಮ್ಮ ಮಂಗಳೂರು ಗುಂಪಿನಿಂದ SDs ಸೀನಿಯರ್
ನಿತೇಶ್ ಪ್ರಸಾದ್ ಪ್ರಸಾದ್ ಹಾಗೂ Sws ಸೀನಿಯರ್ ಯಶಿತ ಈ ಜವಾಬ್ದಾರಿಯನ್ನು
ಹೊತ್ತಿದ್ದರು. ರಾತ್ರಿಯ ಸ್ನಾನ ತುಂಬಾ ಕಷ್ಟದ ಸಂಗತಿಯಾಗಿತ್ತು ನೀರಿನ ವ್ಯವಸ್ಥೆಯು
ಸಾಕಷ್ಟು ಮಟ್ಟಿಗೆ ಇಲ್ಲದ ಕಾರಣ ಸ್ವಲ್ಪಮಟ್ಟಿಗೆ ಫ್ರೆಶ್ ಅಪ್ ಆಗಿ ಯೂನಿಫಾರ್ಮ್ ಸೆಟ್
ಆಗಿ ಮಲಗುವ ಸಮಯ ಸುಮಾರು 11 ರಿಂದ 11:30 ಆಗಿರುತ್ತಿತ್ತು .
ಮಂಗಳೂರು
ಗುಂಪಿನ ಜವಾಬ್ದಾರಿಯನ್ನು CO ಅಮಿತಾಬ್ ಸಾಬ್ ಮತ್ತು ಭರತ್ ಕುಮಾರ್ ರವರು
ನೋಡಿಕೊಳ್ಳುತ್ತಿದ್ದರು. ಮೂರನೇ ದಿನ Pre- RDC 2 ರ ಆಯ್ಕೆಯೂ ಆರು ಗುಂಪುಗಳಾದ
ಮಂಗಳೂರು, ಬೆಂಗಳೂರು-A ಬೆಂಗಳೂರು-B ಮೈಸೂರು ,ಬೆಳಗಾವಿ ,ಬಳ್ಳಾರಿ, ಕೆಡೆಟ್ ಗಳನ್ನು
ಮಿಶ್ರ ಮಾಡಿ ನಂತರ ಇಬ್ಬರಂತೆ ನಿಲ್ಲಿಸಿದರು ಆದರೂ ನನ್ನ ಸರದಿಯಲ್ಲಿ ನನ್ನ ಕಾಲೇಜಿನ
ಅಭಿಷೇಕ ಜೊತೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ನಮ್ಮ
ಆಯ್ಕೆ ಪ್ರಕ್ರಿಯೆ ನಡೆದ ನಂತರ ನಮಗೆ ತರಬೇತುದಾರರಾಗಿ ಪ್ರಶಾಂತ್(drill instructor)
ಹಾಗೂ ತೋಮಸ್(drill instructor ) ನಂತರದ ದಿನದಿಂದ ತರಬೇತಿ ಆರಂಭಿಸಿದರು ಆಯ್ಕೆಯ
ನಂತರ ಒಂದು ದಿನದ ಅಂತರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಆಯ್ಕೆಯು ಜರುಗಿತ್ತು ಇದರಲ್ಲಿ
ನಮ್ಮ ತಂಡವು ಕೊಡಗು ,ತುಳು, ಹಾಗೂ ಕಂಸಾಳೆ ನೃತ್ಯವನ್ನು ಪ್ರದರ್ಶಿಸಿದರು . ನಾನು
ಹಾಗೂ ಅಭಿಷೇಕ್ ಭಾಗಿಯಾಗಿದ್ದೆವು.
ಇದಾದ ಬಳಿಕ ಫ್ಲ್ಯಾಗ್
ಏರಿಯಾ ಇದರ ಟೆಂಟ್ ನಿರ್ಮಾಣ ಅದಕ್ಕೆ ಬೇಕಾಗುವ ಸಾಮಾಗ್ರಿಗಳು ಸಾಗಟ ಇದೆಲ್ಲ ಕೆಲಸ
ಕಾರ್ಯಗಳು ನಡೆಯುತ್ತಿದ್ದವು ನಮ್ಮ ಗುಂಪಿನಲ್ಲಿ3D ಡಿಸೈನಿಂಗ್ ಆಕರ್ಷಣ ಆಗಿತ್ತು ಇದರ
ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನಮ್ಮ ಗುಂಪಿನCO. ಅಮಿತಾಬ್ ಸಾಬ್ ಆಗಿದ್ದರು. ಇದಾದ
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಆಯ್ಕೆಯಾದವರು ಅದರ ಅಭ್ಯಾಸದಲ್ಲಿ ತೊಡಗಿದ್ದರು
ಉಳಿದವರು ಡ್ರಿಲ್ ಅಭ್ಯಾಸದಲ್ಲಿ ತೊಡಗಿದ್ದರು ವಿಶೇಷವೆಂದರೆ ನಮಗೂ ಹಾಗೂ ಮೈಸೂರು
ಗುಂಪಿನ ಮಧ್ಯೆ ನಡೆಯುತ್ತಿದ್ದ ಸ್ಪರ್ಧೆ ಇದರಲ್ಲಿ ಹೆಚ್ಚಾಗಿ ನಾವು ಗೆಲುವನ್ನು
ಸಾಧಿಸುತ್ತಿದ್ದೇವೆ ಇದು ತುಂಬಾ ಹೆಮ್ಮೆಯ ವಿಷಯವಾಗಿತ್ತು. ಇದೇ
ರೀತಿ ಮಳೆ ಇದ್ದರೂ ಕೂಡ ಡ್ರಿಲ್ ಅಭ್ಯಾಸ ಮಾತ್ರ ನಿರಂತರವಾಗಿ ನಡೆಯುತ್ತಿತ್ತು ಇಲ್ಲಿ
ಬೆಳಗ್ಗೆ ಉಪಹಾರಕ್ಕೆ ಪಲಾವ್, ಪೂರಿ, ಚಪಾತಿ, ಬಿಸ್ಕೆಟ್ ,ಮೊಟ್ಟೆ, ಇರುತ್ತಿತ್ತು
ಮಧ್ಯಾಹ್ನ ಮತ್ತು ರಾತ್ರಿ ಮಾಂಸಾಹಾರಿ ಮತ್ತು ಸಸ್ಯಹಾರಿ ಊಟ ಇರುತ್ತಿತ್ತು.
ಇನ್ನು
ನಮ್ಮ ಮುಂದಿನ ಹಂತದ ಕ್ಯಾಂಪ್ ಆಯ್ಕೆ ನಿರ್ಧಾರವಾಗುವ ದಿನ ಹತ್ತಿರ ಬಂತು ಎಂಬುದು
ತಿಳಿಯಲೇ ಇಲ್ಲ. ದಿನಾಂಕ 23-11- 20 21ರಂದು 290 ಕೆಡೆಟ್ಗಳಲ್ಲಿ 74 ಕೆಡೆಟ್ ಗಳನ್ನು
ಆಯ್ಕೆ ಮಾಡಲಾಗಿತ್ತು .ಮೈಸೂರಿನ CO ಅವರು ಆಯ್ಕೆಯಾದವರ ಹೆಸರನ್ನು ತಿಳಿಸುತ್ತಾ ಹೋದರು
ಆದರೆ ಮಂಗಳೂರಿನ ಗುಂಪಿನಿಂದ 34 ಕೆಡೆಟ್ ಗಳಲ್ಲಿ ಕೇವಲ ಹನ್ನೊಂದು ಮಂದಿ ಮಾತ್ರ
ಆಯ್ಕೆಯಾಗಿದ್ದರು. ಇಂತಹ ಸಂದರ್ಭದಲ್ಲಿ ಕೆಲವರು ದುಃಖದಲ್ಲಿ ಕುಳಿತಿದ್ದರೆ ಆಯ್ಕೆಯಾದವರ
ಮುಖದಲ್ಲಿ ಮಂದಹಾಸ ತುಂಬಿತ್ತು. ನಂತರ ದಿನಾಂಕ 24 ರ ಸುಮಾರು
3.30 ರ ಹೊತ್ತಿಗೆ ಬೆಂಗಳೂರಿನ ಯಲಹಂಕದ ಬೃಂದಾವನ ಕಾಲೇಜಿನಿಂದ ಆಯ್ಕೆಯಾದವರಿಗೆ ಶುಭ
ಹಾರೈಕೆಯನ್ನು ತಿಳಿಸುತ್ತಾ , ಬೆಟಾಲಿಯನ್ ನಿಂದ ಬಂದ ಸಾಬ್ ಜೊತೆ ಸೇರಿ ಮತ್ತೆ ನಮ್ಮ
ಊರಿನತ್ತ ಮುಖ ಮಾಡಿದೆವು. ಸುಮಾರು 03:30 ರಿಂದ ಬೆಂಗಳೂರಿನ ಎಂ ಜಿ ರಸ್ತೆಯಲ್ಲಿ
ಸ್ವಲ್ಪ ಸಮಯವನ್ನು ಕಳೆದು, ಊಟ ಆದ ನಂತರ ಮಂಗಳೂರಿನ ಕೆಲವು ಸ್ನೇಹಿತರು ಅವರ ಊರಿಗೆ
ತೆರಳಿದರೆ ನಾವು ಸುಮಾರು ರಾತ್ರಿ 10.30 ಕ್ಕೆ ಹೊರಟು ಸುಮಾರು 6.30 ಕೆ ಸುಳ್ಯಕ್ಕೆ
ತಲುಪಿದೆವು.
ಈ ಹಾದಿಯಲ್ಲಿ ನೋವು-ನಲಿವುಗಳು ಎಷ್ಟೂ ಆದರೆ ಇದು ನಮ್ಮ ಜೀವನದ ಪುಸ್ತಕದಲ್ಲಿ ಅಚ್ಚಳಿಯದಂತೆ ಪುಟ ಆಗಿರುತ್ತದೆ.
No comments:
Post a Comment