ಥಾಲ್ ಸೈನಿಕ್ ಶಿಬಿರದ ಅನುಭವ

 ಒಬ್ಬ ಕೆಡೆಟ್ ಆಗಿ ನಾನು NCC ಗೆ ಸೇ ರಿದಕ್ಕೆ ಹೆಮ್ಮೆ ಪಡುತ್ತೇನೆ. ನನ್ನ ಈ NCC ಪಯಣದಲ್ಲಿ TSC (Thal sainik camp) ಮಹೋ ತ್ತರ ಸ್ಥಾನ ಪಡೆಯುತ್ತದೆ. ಈ ಕ್ಯಾಂಪ್ ನಿಂದ ನನಗೆ ದೊರೆತ ಅನುಭವದ ಜೊ ತೆಗೆ TSC ಬಗ್ಗೆ ನಾನು ಸಂಗ್ರಹಿಸಿದ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊ ಳ್ಳಲು ಹರ್ಷಿಸುತ್ತೇನೆ..

TSC ಎಂದರೆ ಏನು?
TSC ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆಸುವ 12 ದಿನಗಳ ಶಿಬಿರವಾಗಿದೆ. ಇದು
NCC ವತಿಯಿಂದ ಕೇಂದ್ರೀತ ಆಯೋ ಜಿಸಲಾಗಿದೆ. ಇದರಲ್ಲಿ ಎಲ್ಲಾ 17 ನಿರ್ದೇ ಶನಾಲಯ
(Directorates) ಗಳಿಂದ ಕೆಡೆಟ್ಗಳನ್ನು ಆಯ್ಕೆ ಮಾಡುತ್ತಾರೆ ,30+3 ಕೆಡೆಟ್ಗಳಿಂದ ಪ್ರತಿ ನಿರ್ದೇ ಶನಾಲಯದಿಂದ. (ಈ ಸಂಖ್ಯೆ ಬದಲು ಆಗುತ್ತಿರುತ್ತದೆ) . 2 ಪೂರ್ವ TSC , IGC ಹಾಗು 2
ಪೂರ್ವ IGC ಶಿಬಿರಗಳನ್ನು ನಡೆಸುವ ಮೂಲಕ TSC ಗೆ ಆಯ್ಕೆ ಮಾಡುತ್ತಾರೆ. ಇದು ಕೇ ವಲ NCC ಸೇನಾ ವಿಭಾಗ (army wing) ಕ್ಯಾಡಿಟ್ ಗಳಿಗೆ ಸೀಮಿತವಾಗಿರುತ್ತದೆ. ನನಗೆ ಟಿ ಎಸ್ ಸಿ ಯಲ್ಲಿ
ನಾಲ್ಕು ಕ್ಯಾಂಪ್ ಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿ ತು ಇದಕ್ಕೆ ಮುಖ್ಯ ಕಾರಣರಾದ ನಮ್ಮ ANO
sir LT. ಸೀತಾರಾಮ ಎಂಡಿ ಜೊತೆಗೆ ನಮ್ಮ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ಮೇ ಡಂ ಇವರಿಗೆ
ಧನ್ಯವಾದ ಈ ಮೂಲಕ ಸಮರ್ಪಿ ಸುತ್ತೇನೆ.

ಟಿ ಎಸ್ ಸಿ ಯ ಅಂಗವಾಗಿ ನಡೆದ ಮೊದಲ ಕ್ಯಾಂಪ್ ಅದಾಗಿತ್ತು ಮೂಡಬಿದ್ರೆಯ ಮಹಾವೀ ರ ಕಾಲೇ ಜಿನಲ್ಲಿ (04/07/2022-13/07/2022), 18 ಕರ್ನಾ ಟಕ ಬೆಟಾಲಿಯನ್ ಮಂಗಳೂರು ಈ ಕ್ಯಾಂಪನ್ನು ನಿರ್ವ ಹಿಸಿತು. ನಮ್ಮ ಕಾಲೇ ಜಿನಿಂದ ನಾನು, ವಿಜಯ್ ಸೀ ನಿಯರ್,ರಂಜಿತ್ ಸೀ ನಿಯರ್, ಡೀ ನ ಸೀ ನಿಯರ್ , ಪ್ರತೀ ಕ್ಷಾ ಸೀ ನಿಯರ್ ಹಾಗೂ ವಂಶಿ ಈ ಕ್ಯಾಂಪ್ ನಲ್ಲಿ ಭಾಗವಹಿಸಿದೆವು.ನನ್ನ ಎರದನೆಯ ಕ್ಯಾಂಪ್ ಇದಾಗಿತ್ತು.

TSCಯ ಉದ್ದೇಶ ಹಾಗೂ ಲಾಭಗಳು.
ತಳ್ ಸೈ ನಿಕ್ ಕ್ಯಾಂಪ್ ಸೇ ನಾ ತರಬೇ ತಿಯ ಪ್ರಮುಖ ಲಕ್ಷಣವನ್ನು ಬಹಿರಂಗಪಡಿಸುವುದು,
ಆರೋ ಗ್ಯಕರ ಸ್ಪರ್ಧಾ ತ್ಮಕ ಮನೋ ಭಾವವನ್ನು ಹುಟ್ಟುಹಾಕುವುದು ಮತ್ತು ಕೆಡೆಟ್ಗಳಲ್ಲಿ ಶಿಸ್ತು, ನಾಯಕತ್ವ ಮತ್ತು ರಾಷ್ಟ್ರೀಯ ಏಕೀ ಕರಣದ ಪ್ರಜ್ಞೆ ಯನ್ನು ಬೆಳೆಸುವುದು.
➢ಟಿಎಸ್ಸಿ ಶಿಬಿರವನ್ನು ಪೂರ್ಣ ಗೊ ಳಿಸಿದವರು
ನಕ್ಷೆ ಓದುವಿಕೆ ಮತ್ತು ಗುಂಡಿನ ಕೌಶಲ್ಯಗಳ ವಿಷಯದಲ್ಲಿ ಭಾರತೀ ಯ ಸೈ ನಿಕನಿಗೆ ಸಮನನು
ಎನ್ನು ತ್ತಾರೆ.
➢ ಟಿಎಸ್ಸಿ ಶಿಬಿರವನ್ನು ಪೂರ್ಣ ಗೊ ಳಿಸುವುದರಿಂದ 'C certificate' ಪರೀ ಕ್ಷೆ ಗೆ 25 ಬೋ ನಸ್
ಅಂಕಗಳು ಸಿಗುತ್ತದೆ.
➢ ಇದು CAPF ನಂತಹ ಸ್ಪರ್ಧಾ ತ್ಮಕ ಪರೀ ಕ್ಷೆ ಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಿಮಗೆ
ಸಹಾಯ ಮಾಡುತ್ತದೆ.
➢ ಸೈ ನ್ಯಕ್ಕೆ ಸಂಬಂಧಿಸಿದ ಸಾಕಷ್ಟು ಜ್ಞಾ ನವನ್ನು ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ.

Events in TSC
TSC ಅಲ್ಲಿ ಐದು ಚಟುವಟಿಕೆಗಳ (events) ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಅವುಗಳು,
1.Firing
2. Tent pitching and Obstacle training(TP&OT)
3.Health and Hygiene (H&H)
4.Field craft and battle craft(FC&BC)
5.Map reading
ನಾನು ಮೊದಲಿನ ಕ್ಯಾಂಪನಲ್ಲಿ ಹೆಲ್ತ್ ಅಂಡ್ ಹೈ ಜೀ ನ್ ಇವೆಂಟನ್ನು ಆಯ್ದುಕೊಂಡು ಮುಂದಿನ ಕ್ಯಾ ಪಿಗೆ
ಆಯ್ಕೆ ಯಾದೆ. ಅದು ಆದದ್ದು ಶ್ರೀ ಜಗದ್ಗುರು ಚಂದ್ರಶೇಖರ ಭಾರತಿ ಮೆಮೋ ರಿಯಲ್ ಕಾಲೇಜು
ಶೃಂಗೇರಿಯಲ್ಲಿ(24/07/2022-02/08/2022) 21 ಕರ್ನಾಟಕ ಬಉಡು ಪೂರ್ವ ಐಜಿಸಿ 2
 ಆಯೋ ಜಿಸಿದ್ದರು.



ಮಹಾವೀರ ಕಾಲೇಜಿನಲ್ಲಿ ನಾನು , ವಿಜಯ್ ಸೀ ನಿಯರ್ ಹಾಗೂ ರಂಜಿತ್ ಸೀನಿಯರ್.


ಈ ಕ್ಯಾಂಪ್ ಗೆ ಕಾಲೇಜಿನಿಂದ ನಾನು, ವಂಶಿ ಹಾಗೂ ಡೀನಾ ಸೀನಿಯರ್ ಆಯ್ಕೆ ಯಾಗಿದ್ದೆವು. ಇಲ್ಲಿ ನಮ್ಮ ನಮ್ಮ ಈವೆಂಟಿಗಳಿಗೆ ತರಬೇ ತಿ ಕೊ ಟ್ಟು ನಮ್ಮನ್ನು ಐಜಿಸಿ ಕಳಿಸಲು ಆಯ್ಕೆ ಮಾಡುತ್ತಾರೆ. ನನಗೆ ಮಂಗಳೂರು ಗ್ರೂಪ್ ನ ಹಲವು ಕ್ಯಾಡೆಟ್ ಗಳು ಸ್ನೇಹಿತರಾದರು. ಇಲ್ಲಿಂದ ನಾನು (Inter Group competition) ಗೆ ಆಯ್ಕಆದೆ.

ಇಂಟರ್ ಗ್ರೂ ಪ್ ಕಾಂಪಿಟೇ ಶನ್ ನಮ್ಮ Karnataka & Goa directorateಅಲ್ಲಿ ಹುಡುಗರಿಗೂ ಹಾಗೂ ಹುಡುಗರಿಗೂ (SD's and SW's)ಇಂಟರ್ ಗ್ರೂ ಪ್ ಕಾಂಪಿಟೇ ಶನ್ ಬೇ ರೆ ಬೇ ರೆ ಗ್ರೂಪ್ ಗಳು ನಡೆಸುತ್ತದೆ. ಹೆಚ್ಚಾಗಿ ನಮ್ ಮಂಗಳೂರು ಗ್ರೂಪ್ SW's ಗಳಿಗೆ ಆಳ್ವಾಸ್ ಕಾಲೇಜ್ ಮೂಡಬಿದ್ರೆಯಲ್ಲಿ ಐಜಿಸಿ ನಡೆಸಿದರೆ. ಬಳ್ಳಾರಿ ಗ್ರೂಪ್ ವಿಜಯಪುರದ ಹನುಮನಗರದಲ್ಲಿ 36 ಕರ್ನಾಟಕ ಬೆಟಾಲಿಯನ್ ವಿಜಯಪುರ ಇದರ ಆಶ್ರಯದಲ್ಲಿ IGC-TSC(BOYS) ಕ್ಯಾಂಪ್ 12/08/2022 ರಿಂದ 19/08/2022 ವರೆಗೆ ನೆರವೇ ರಿತು. ಅಲ್ಲಿಗೆ ಮಂಗಳೂರು ಗ್ರೂಪನ್ನು ಪ್ರತಿನಿಧಿಸಿ ಸುಮಾರು 49 ಕ್ಯಾ ಡೆಟ್ ಗಳು ರೈಲಿನ ಪ್ರಯಾಣದ ಮುಖಾಂತರ ಸಾಗಿದೆವು. ನಮಗೆ ಹಲವು ಅಚ್ಚರಿಯ ಸಂಗತಿಗಳು ಅಲ್ಲಿ ಕಾದಿತ್



ವಿಜಯಪುರದಲ್ಲಿ ನನ್ನ TSC ದಿನಗಳು ರೈಲಿನಿಂದ ಇಳಿಯುತ್ತಲೇ ಕಂಡೆ ಎಷ್ಟೋ ದಿನಗಳಿಂದ ನೋ ಡ ಬೇ ಕೆಂದ ಗೊ ಳ ಗುಮ್ಮಟವನ್ನು ನೋಡುತ್ತಲೇ ಪೊಲೀಸ್ ವ್ಯಾನ್ ನಮ್ಮನ್ನು ಕಾಯುತ್ತಿತ್ತು, ಎಲ್ಲರೂ ಹತ್ತಿದೆವು ಆಊರ ರಸ್ತೆ ಹಳ್ಳ, ಕೊಳ್ಳ , ಫ್ಯಾಕ್ಟರಿ, ಪಡುಬಿದ್ದಎಷ್ಟೋ ಹಳೆ ಕೋಟೆಗಳು, ಸುತ್ತುವರಿದ ತಡೆ ಗೋ ಡೆಗಳು,ಬಿಸಿಲು ದೂಳು ಎಲ್ಲವನ್ನೂ ಮೌನದಿಂದ ಕಂಡೆವು. ಅಷ್ಟರಲ್ಲಿ ಕ್ಯಾಂಪ್ ನಡೆಯುವ ಸ್ಥಳಕ್ಕೆ ತಲುಪಿದೆವು ಅಲ್ಲಿಗೆ ಹನುಮನಗರ ಎಂದು ಕರೀತಾರೆ. ಒಂದು ಜಿನ ಭವನದ ಮಗ್ಗುಲಲ್ಲಿ ನಮ್ಮ ಉಳಿದುಕೊಳ್ಳುವ ಕೋಣೆ ಇತ್ತು, ಅಲ್ಲಿಯ ಪರಿಸರ , ಬೇರೆ ಮೈಸೂರು, ಬೆಳಗಾವಿ, ಬೆಂಗಳೂರು A ಮತ್ತು B, ಬಳ್ಳಾರಿ ಗ್ರೂಪ್ ಗಳಿಂದ ಬಂದಿದ್ದಕ್ಯಾ ಡೆಟ್ಗಳನ್ನು ನೋಡಿ ಖುಷಿ ಆಯಿತು ಜೊತೆಗೆ ಇವರೋದಿಗೆ ನಮ್ಮ ಸ್ಪ ರ್ದೆ ಎಂದು ಭಯವೂ ಆಯಿತು. ನಮ್ಮ ಜಂಗಮವಾಣಿ (ಮೊಬೈಲ್) ಗಳನ್ನ ಅವರು ತಕೊಂಡರು ಇನ್ನೂ ಕ್ಯಾಂಪ್ ಮುಗಿದಮೇ ಲೆ ನೀಡುತ್ತೇವೆ ಎಂದರು.



ನಾನು IGCಯಲ್ಲಿhealth and hygiene Viva test ಕೊಡುವ ಚಿತ್ರ
(Source:Directorate Twitter hanKARGO
TSC IGC KARGO


Golgumbaz ಗೆ ತೆರಳುವ ಚಿತ್ರ.



ಜೀವನದ ಅಚ್ಚರಿಯ ಪುಟಗಳು ಅಲ್ಲಿ ಬಿಡಿಸಿದೆ , ಮೊಬೈಲ್ ಇಲ್ಲದೇ ಎಲ್ಲರೂ ಖುಷಿಯಿಂದ ನಮಗೆ ನೀಡಿದ ಕೋಣೆಯಲ್ಲಿ ಹಾಡಿಕೊಂಡು ಆಡಿಕೊಂಡು ನಲಿದೆವು ರಾತ್ರಿಯೆಲ್ಲಕೂತು ಹೆಲ್ತ್ ಅಂಡ್ ಹೈಜಿನ್ ಓದಿದೆ ಮರುದಿನ ಪರೀಕ್ಷೆ ಇತ್ತು. ಅಂದು ಸ್ವತಂತ್ರ ದಿನಾಚರಣೆಗೆ ಆಗಿತ್ತು , ನಾನು ಆದಿನವನ್ನ ಅಲ್ಲಿ ಕಳೆದದ್ದು ಒಂದು ಒಳ್ಳೆನೆನಪು. ಫೋನ್ ಕೂಡ ಇಲ್ಲದೇ ನನಗೆ ಮನೆಯವರು,ಗೆಳೆಯರು,ಶಿಕ್ಷಕರು ಎಲ್ಲನೆನಪಾಗುತ್ತಿದೆ ಎಂದು ಅನಿಸುತಿತ್ತು.ಎದೆಗುಂದದೆ ಮುಂದೆ ನೋಡುತ್ತಿದ್ದೆ ,
ಕ್ಯಾಂಪ್ ನ ದಿನಚರಿ ಹಾಗೆ ನಡೆಯುತಿತ್ತು ಬೆಳಿಗ್ಗೆ PT ಇಂದ ದಿನ ಶುರುವಾಗಿ ರಾತ್ರಿ ಊಟದಿಂದ ಮುಗಿಯುತ್ತಿತ್ತು.ಅಸ್ಟರಲ್ಲೇ ಕೊನೆಯ ದಿನ ಬಂತು ಪರೀಕ್ಷೆ ಯ ಫಲಿತಾಂಶ ನನ್ನನ್ನು ಮುಂದಿನ ಕ್ಯಾಂಪ್ ಗೆ ಆಯ್ಕೆ ಮಾಡಿತು,ಕೊನೆಯ ದಿನ ನಾವು ಮಂಗಳೂರು ಗ್ರೂಪ್ ಇಂದ ನೃತ್ಯಗೈದು ಎಲ್ಲರನ್ನೂ ರಂಜಿಸಿದವು ನಾವು ಸಂತೋಷ ಪಟ್ಟೆವು, ಹೊರಡುವ ದಿನ ನಮ್ಮನ್ನು ಗೋಳ ಗುಮ್ಮಟ ನೋಡಲು .ಕರೆದು ಕೊಂಡು ಹೋದರು. ಅಲ್ಲಿಂದ ನಾವು ಮನೆಗೆ ರೈಲಿನಲ್ಲಿ ಹಿಂತಿರುಗಿದೆವು.


ಅಂದು ಕಾಲೇ ಜಿನಲ್ಲಿ ಎಲ್ಲರೂ ನನ್ನಗೆಲುವನ್ನು ಹರ್ಷಿಸಿದರು ಮುಂದಿನ ಕ್ಯಾಂಪ್ ಗೆ ಹಾರೈಸಿದರು, ಒಂದು ವಾರದ ನಂತರ ಪುನಃ ವಿಜಯಪುರ ಕ್ಕೆ ಕೇವಲ 22 ಜನ TSC 2 (Boys)ಕ್ಯಾಂಪ್ (27/08/2022-03/09/2022) ಇಗೆ ತೆರಳಿದೆವು. ಹೊಸತಿರುವು ಇಲ್ಲಿ ಕಂಡೆ ಹೆಲ್ತ್ ಅಂಡ್ ಹೈಜಿನ್ ಇವೆಂಟಿಗೆ ಅದೇ ಕೊನೆಯ ಆಯ್ಕೆಯಾಗಿತ್ತು ನಾನು ಆಯ್ಕೆ ಯಾಗುತ್ತಿದ್ದಾರೆ ಟಿಎಸ್ಸಿ ಪೂರ್ಣ ಗೊಳ್ಳುತ್ತಿತ್ತು.


ಆದರೆ ಅದಾಗಲಿಲ್ಲನಾನು ಕೊನೆಯ ಹಂತದಲ್ಲಿ ಆಯ್ಕೆ ಆಗಲಿಲ್ಲಆದರೂ ಇದಕ್ಕಾಗಿ ನಾನು ವ್ಯತಿಸುವುದಿಲ್ಲಏಕೆಂದರೆ ಹಲವಾರು ಅನುಭವ ನನಗಾಗಿದೆ , ನನಗೆ ಆತ್ಮೀಯ ಗೆಳೆಯರು ಹೆಚ್ಚಾದರು. ಹಲವಾರು ಮೌಲ್ಯಗಳನ್ನು ನಾನು ಕಲಿತಿದ್ದೇನೆ ಎಲ್ಲರೊಂದಿಗೆ ಹೊಂದಿಕೊಂಡು ಹೋಗಬೇಕು, ಸಮಯಪ್ರಜ್ಞೆ ,ಏಕತೆ ,ಅನುಷಾಸನ, ಬೇರೆ ಜಿಲ್ಲೆಗಳ ಜನರ ಮಾತು ಶೈಲಿ ಆರ್ಮಿಸ್ಟಾಫ್ ಗಳೊಂದಿಗೆ ನಡೆದ ಈ ನಾಲ್ಕು ಕ್ಯಾಂಪ್ ಗಳು ನನಗೆ ಉತ್ತಮವಾದ ಅನುಭವವನ್ನು ನೀಡಿದೆ. ನಾನು ಇಲ್ಲಿಯ ವರೆಗೂ ತಿಳಿಯದ ಹೊಸ ವಿಷಯಗಳನ್ನೂ ಕಲಿತೆ, ಈ ಸೋಲು ನನಗೆ ಗೆಲ್ಲುವುದನ್ನು ಕಲಿಸಿದೆ, ಟಿ ಎಸ್ ಸಿ ಒಂದು ಒಳ್ಳೆಯ ಅನುಭವ ಸಾಧ್ಯವಾದರೆ ನೀವು ಪಡೆಯಿರಿ. ನನ್ನ ಜೀವನದ ಸವಿ
ನೆನಪಿನ ಸಂಗತಿ……….

TSC

ಕ್ಯಾಂಪ್ ನ ಕೆಲ ಸಿಹಿ ಅನುಭವಗಳನ್ನು ಇಲ್ಲಿ ಚಿತ್ರಿಸಿದ್ದೆನೆ, ಹೇಳದ ಎಷ್ಟು ವಿಷಯಗಳು, ನೂರಾರು ನೆನಪುಗಳು ಮನದಲ್ಲೇ ಉಳಿದಿದೆ.

Cdt.Dhyaan Vijay
KAR/21/SD/A/387686
19 Karnataka battalion NCC Madikeri
Nehru Memorial pre- University college Sullia.

NMC-NCC-Sullia

National Cadet Corps, Nehru Memorial College Sullia Unit, Under 19 Karnataka Battalion Madikeri. The National Cadet Corps is the youth wing of the Indian Armed Forces with its headquarters in New Delhi, which trains and motivates the youth of our country to become a disciplined person and help him join the armed forces if he wishes to.

No comments:

Post a Comment