ನಾನು ಎನ್. ಸಿ. ಸಿ ಯಲ್ಲಿ ಅಂತಿಮ ವರ್ಷದಲ್ಲಿದ್ದರೂ ನನಗೆ ದೊರಕಿದ್ದು ಎನ್. ಸಿ. ಸಿ ಜೀವನದಲ್ಲಿ ಇದು ಮೊದಲ ಕ್ಯಾಂಪ್. ನಾವು 6 ಜನ ನಮ್ಮ ಕಾಲೇಜಿನಿಂದ ಟ್ರಿಪ್ ಆಳ್ವಾಸ್ನಲ್ಲಿ ನಡೆಯುವ CATC ಕ್ಯಾಂಪ್ ಗೆ ಹೊರಟೆವು. ದಿನಾಂಕ 26/11/2021ರಂದು ಬೆಳಗ್ಗೆ ಮತ್ತು 8.00 ಗಂಟೆಗೆ ಸುಳ್ಯ ಬಸ್ ಸ್ಟ್ಯಾಂಡಿನಿಂದ ಪುತ್ತೂರಿಗೆ ಹೊರಟೆವು. ಅಲ್ಲಿ ನಮ್ಮ ಜೊತೆಗೆ ಕ್ಯಾಂಪ್‌ಗೆ ಬರುವ ಎನ್. ಸಿ. ಸಿ ವಿದ್ಯಾರ್ಥಿಗಳು ಸೇರಿ ಬೆಟಾಲಿಯಲಿನಿಂದ ಬರುವ ಬಸ್‌ಗಾಗಿ ಕಾಯುತ್ತಾ ಕುಳಿತೆವು. ನಾವು ಅವರ ಜೊತೆ ಮಾತಾಡಿ ಸ್ನೇಹ ಬೆಳೆಸಿಕೊಂಡೆವು. ನಂತರ ಸ್ವಲ್ಪ ಹೊತ್ತಿನಲ್ಲಿ ಬೆಟಾಲಿಯಲಿನಿಂದ ಬಸ್ ಬಂತು. ನಾವು ಆ ಬಸ್ಸಿನಲ್ಲಿ ಪುತ್ತೂರಿನಿಂದ ಆಳ್ವಾಸ್ ಗೆ ಹೊರಟೆವು. ಮೊದಲಿಗೆ ಆ ಬಸ್ಸಿನಲ್ಲಿ ನಮ್ಮ ಕಾಲೇಜಿನವರನ್ನು ಬಿಟ್ಟು ಬೇರೆ ಯಾರೂ ಕೂಡ ನಮಗೆ ಪರಿಚಯ ಇರಲ್ಲಿಲ್ಲ. ಇದರಿಂದಾಗಿ ಬಸ್ ತುಂಬಾ ಮೌನವೇ ತುಂಬಿತ್ತು. ನಂತರ ನಾವು 12.30 ಗೆ ಆಳ್ವಾಸ್ ತಲುಪಿದೆವು. ನಮ್ಮನ್ನು ಮೊದಲ ಕ್ಯಾಂಪ್ ಗೆ ಹೋಗಿದ್ದ ನಮ್ಮ ಕಾಲೇಜಿನ ಎನ್. ಸಿ. ಸಿ ಸ್ನೇಹಿತರು ಸ್ವಾಗತಿಸಿದರು. ನಮಗೆ ಅಲ್ಲಿನ ದಿನಚರಿಯನ್ನು ನಮಗೆ ಹೇಳಿ ನಾವು ಬಂದ ಬಸ್ಸಿನಲ್ಲಿಯೇ ಅವರು ಹೊರಟರು. ನಮ್ಮನ್ನು ಒಂದು ದೊಡ್ಡ ಹಾಲಿನಲ್ಲಿ ರಾತ್ರಿಯ ವರೆಗೂ ಕೂರಿಸಿದ್ದರು. ನಂತರ ಆ ದಿನದ ಎಲ್ಲಾ ಕೆಲಸಗಳನ್ನು ಮುಗಿಸಿ ಊಟ ಮುಗಿಸಿ ವಸತಿ ಗೃಹಕ್ಕೆ ಕಳುಹಿಸಿದರು. ನಾವು 4 ಜನ ಒಂದು ರೂಮಿನಲ್ಲಿ ಉಳಿದುಕೊಂಡೆವು. ನಾನು ಮತ್ತು ನನ್ನ ಗೆಳತಿ ಮತ್ತು ಇಬ್ಬರು ಬೇರೆ ಕಾಲೇಜಿನವರೊಂದಿಗೆ ಉಳಿದವು. ಆ ರಾತ್ರಿ ತುಂಬಾ ತಡವಾದ ಕಾರಣ ಬೇಗನೆ ಮಲಗಿದೆವು. ನಂತರ ಬೆಳಗ್ಗೆ ಬೇಗನೇ ಎದ್ದು ಎನ್. ಸಿ. ಸಿ ಉಡುಪುಗಳನ್ನು ರೆಡಿಮಾಡಿ, PET ಗೆ 6.15 ಕ್ಕೆಹೋಗಲು ಹೊರಟೆವು. ನಮ್ಮ ತಂಡ ಡೆಲ್ಟಾ ಆಗಿದ್ದರಿಂದ ನಾವು ಅದೇ ತಂಡದಲ್ಲಿ ನಿಂತಿದ್ದೆವು. ನಂತರ ಜಾಗಿಂಗ್ ಎಲ್ಲಾ ಮಾಡಿ, 7.05 ಕ್ಕೆ ಚಹಾ ಕುಡಿಯಲು ತೆರಳಿದೆವು. ಅಲ್ಲಿ ಚಹಾ ಕುಡಿದು ನಂತರ ವಸತಿ ಗೃಹಕ್ಕೆ ತೆರಳಿದೆವು. ನಂತರ ಎನ್. ಸಿ.ಸಿ ಉಡುಪು ಧರಿಸಿ ಕೆಳಗಡೆ ಕ್ಯಾಂಪ್ ನಡೆಯುವ ಸ್ಥಳದಲ್ಲಿ ಫಾಲ್ ಇನ್ ಆದೆವು. ನಂತರ ಒಂದು ಗಂಟೆ ಕಾಲ ಡ್ರಿಲ್ ಪ್ರಾಕ್ಟೀಸ್ ಮಾಡಿಸಿದರು. ನಂತರ ನಮಗೆ 11.00 ಮಜ್ಜಿಗೆ ಕೊಡುತ್ತಿದ್ದರು. ನಂತರ ಆಡಿಯೊ ವಿಶ್ಯ್ ವಲ್ ರೂಂ ನಲ್ಲಿ ಪಾಠ ಮಾಡುತ್ತಿದ್ದರು. ನಂತರ ಊಟದ ಸಮಯ. ಆಗ ನಮಗೆ ವಿವಿಧ ಬಗೆಯ ಸಾಂಬಾರ ಪದಾರ್ಥಗಳು ದೊರಕುತ್ತಿತ್ತು. ಹಪ್ಪಳ, ಐಸ್‌ಕ್ರೀಂ ಸಹ ದೊರಕುತಿತ್ತು. ನಂತರ ನಮಗೆ 3.00 ಗಂಟೆ ತನಕ ವಿಶ್ರಾಂತಿ ಪಡೆಯಲು ಅವಕಾಶ ಕೊಡುತ್ತಿದ್ದರು. ನಂತರ ನಮಗೆ ತರಗತಿಯಲ್ಲಿ ಎನ್. ಸಿ. ಸಿ ಬಗ್ಗೆ ಸಾಬ್ ಗಳು ಪಾಠ ಮಾಡುತ್ತಿದ್ದರು. ನಂತರ ಚಹಾ ಕುಡಿದು ನಂತರ 6.00 ಗಂಟೆಗೆ ಗ್ರೌಂಡ್ ನಲ್ಲಿ ಆಟ ಆಡಲು ಬಿಡುತ್ತಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ದ ಬಗ್ಗೆ ನಮ್ಮ ನಮ್ಮ ತಂಡ ಕಟ್ಟಿಕೊಂಡು ಮಾತನಾಡುತಿದ್ದೆವು. ನಂತರ ರೋಲ್ ಕಾಲ್ ಟೈಂ ಎಲ್ಲಾ ಮುಗಿದ ನಂತರ ಊಟ ಮುಗಿಸಿ ವಸತಿ ಗೃಹಕ್ಕೆ ತೆರಳಿದೆವು. ನಂತರ ಬಟ್ಟೆ ಒಗೆದು, ಇಸ್ತ್ರಿ ಮಾಡಿ, ಸ್ನಾನ ಮುಗಿಸಿ ನಮ್ಮ ರೂಂಗೆ ಸೇರಿಕೊಂಡೆವು. ಹೀಗೆ ದಿನಂಪ್ರತಿ ಇದೇ ರೀತಿ ನಡೆಯುತ್ತಿತ್ತು. ನಾನು ಈ ಕ್ಯಾಂಪ್‌ನಲ್ಲಿ ಫೈಯರಿಂಗ್ ಕಲಿತಿದ್ದೇನೆ. ಹೀಗೆ ನನ್ನ ಜೀವನಕ್ಕೆ ಬೇಕಾದ ವಿಷಯಗಳನ್ನು ಕಲಿತ್ತಿದ್ದೇನೆ. ಈ ಕ್ಯಾಂಪ್ ನಲ್ಲಿ ಶೇರ್ ಶಾ ಫಿಲ್ಮ್ ನೋಡಿದ್ದೇನೆ. ಈ ಫಿಲ್ಮ್ ನಮ್ಮೆಲ್ಲರ ಕಣ್ಣಿನಲ್ಲಿ ಕಣ್ಣೀರು ತಂದಿತು. ನನಗೆ ಈ ಕ್ಯಾಂಪ್ ಎಂದಿಗೂ ಮರೆಯಲಾಗದ ಸವಿನೆನಪು. ಈ ಹತ್ತು ದಿನಗಳ ಕ್ಯಾಂಪ್ ನನಗೆ ವಿಶೇಷ ನೆನಪು ಗಳಾಗಿವೆ. ನನಗೆ ಎಲ್ಲಾ ವಿಷಯಗಳನ್ನೂ ಹೇಳಲಾಗದಿದ್ದರೂ ನನ್ನಿಂದ ಸಾಧ್ಯ ವಾದಷ್ಟು ವಿಷಯವನ್ನು ಹಂಚಿಕೊಂಡಿದ್ದೇನೆ.
CPL. Thanvi M
KAR/19/SW/A/387715
No comments:
Post a Comment